ಎನ್ನೆಸ್ಸೆಸ್ ಶಿಬಿರದಿಂದ ಸಾಮರ್ಥ್ಯ ವೃದ್ಧಿ: ಶೇಖರ ಕುಕ್ಕೇಡಿ

ಬಂಟ್ವಾಳ,ನ.29: ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಶಿಬಿರದ ಅನುಭವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶೇಖರ ಕುಕ್ಕೇಡಿ ಹೇಳಿದ್ದಾರೆ.
ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಮುಷ್ಠಿಯ ಚಿಂತನೆಯಿಂದ ಸಮುದಾಯದ ಸಬಲೀಕರಣವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಅಭಿವೃದ್ಧಿ, ಜಾಗೃತಿ ಮೂಡಿಸಲು ಎನ್ನೆಸ್ಸೆಸ್ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲನಪ್ರೊ. ಹರಿಪ್ರಸಾದ್ ಬಿ. ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ, ಬೆಳ್ತಂಗಡಿ ತಾಪಂ ಸದಸ್ಯೆ ಸುಶೀಲಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಮೂಲ್ಯ, ವೇಣೂರು ವಲಯ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಠಲ ಪೂಜಾರಿ, ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೇಡಿಯ ಮುಖ್ಯೋಪಾಧ್ಯಾಯ ಭಾಸ್ಕರ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ರೋನಾಲ್ಡ್ ಪ್ರವೀಣ್ ಕೊರೆಯ, ಡಾ. ಮೇರಿ ಎಂ.ಜೆ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕರುಗಳು ಉಪಸ್ಥಿತರಿದ್ದರು.
ಏಳು ದಿನಗಳ ಕಾಲ ನಡೆದ ಈ ವಾರ್ಷಿಕ ವಿಶೇಷ ಶಿಬಿರದಲ್ಲಿ ಇಂಗು ಗುಂಡಿ ನಿರ್ಮಾಣ, ಗ್ರಾಮ ಸ್ವಚ್ಛತೆ ಅಭಿಯಾನ, ತೆಂಗಿನಗಿಡ ನೆಡುವುದು, ಕಳೆ ಕೀಳುವುದು. ರಸ್ತೆ ರಿಪೇರಿ ಮಾಜಿ ಸೈನಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಶೈಕ್ಷಣಿಕ ಕಾರ್ಯಕ್ರಮದಲ್ಲಿ ಜಾಗೃತಿ ಹಾಡುಗಳ ಮೂಲಕ ಯುವಜಾಗೃತಿ, ನಾಯಕತ್ವ ಸಂಸ್ಕಾರ ಮತ್ತು ಸಂಸ್ಕøತಿ, ಕಲಿಕೆಯಲ್ಲಿ ರಂಗಕಲೆ, ಸ್ವ-ಉದ್ಯೋಗ ಭಾರತಿಯ ಸೈನ್ಯದಲ್ಲಿ ಉದ್ಯೋಗಾವಕಾಶಗಳ ಇವುಗಳ ಬಗ್ಗೆ ಉಪನ್ಯಾಸ ಸಂವಾದ ಕಾರ್ಯಕ್ರಮಗಳು ನಡೆಯಿತು.
ಘಟಕದ ನಾಯಕ ಮಹೇಶ್ ಶಿಬಿರದ ವರದಿ ವಾಚಿಸಿದರು. ಭವ್ಯಾ ಸ್ವಾಗತಿಸಿ, ಸಂದೇಶ್‍ರವರ ವಂದಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.







