ಅಬಾಕಸ್ ನಲ್ಲಿ ಐಪಿಎ ಮುಂಡಗೋಡ ಸೆಂಟರ್ ಗೆ ಪ್ರಶಸ್ತಿ
.jpg)
ಮುಂಡಗೋಡ,ನ.29: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಇತ್ತಿಚೆಗೆ ಕಾರವಾರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 12 ನೇ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ಮುಂಡಗೋಡ ಐಪಿಎ ಸೆಂಟರ್‍ನ ಮೂವರು ವಿಧ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದಿದ್ದಾರೆ.
ಸಮೃಧ್ದಿ ಜ್ಯೋತಿಬಾ ಉರಣಕರ್, ಶಿವಾನಿ ರಾಘವೇಂದ್ರ ಲೋಟ್ಲೇಕರ್, ಸ್ವಾತಿ ವಿನಾಯಕ ಕಾಮತ್ ಪ್ರಶಸ್ತಿ ವಿಜೇತ ವಿಧ್ಯಾರ್ಥಿಗಳು. ಸ್ಪರ್ಧೆಯಲ್ಲಿ ಒಟ್ಟು 1129 ವಿಧ್ಯಾರ್ಥಿ/ ವಿಧ್ಯಾರ್ಥಿನಿಯರು ಭಾಗವಹಿಸಿದ್ದರು. ವಿಜೇತರಿಗೆ ಐಪಿಎ ಮುಂಡಗೋಡ ಮತ್ತು ಗ್ಯಾಲಕ್ಸಿ ಕಂಪ್ಯೂಟರ್‍ನ ಮುಖ್ಯಸ್ಥರಾದ ರಾಜೇಶ್ವರಿ ಅಂಡಗಿಯವರು ಅಭಿನಂದಿಸಿದ್ದಾರೆ.
Next Story





