ಜನವರಿಯಲ್ಲಿ ರಜಿನಿಕಾಂತ್ ರಾಜಕೀಯ ಎಂಟ್ರಿ

ಧರ್ಮಪುರಿ, ನ.29: ತಮ್ಮ ರಾಜಕೀಯ ಪ್ರವೇಶ ಹಾಗು ಪಕ್ಷದ ಬಗ್ಗೆ ಸೂಪರ್ ಸ್ಟಾರ್ ರಜಿನಿಕಾಂತ್ ಜನವರಿ ತಿಂಗಳಲ್ಲಿ ಘೋಷಿಸಲಿದ್ದಾರೆ ಎಂದು ರಜಿನಿ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಹೇಳಿದ್ದಾರೆ.
ರಜಿನಿಕಾಂತ್ ಫ್ಯಾನ್ ಕ್ಲಬ್ ಜಿಲ್ಲಾ ಕಾರ್ಯದರ್ಶಿಯ ಪುತ್ರನ ಮದುವೆಯಲ್ಲಿ ಪಾಲ್ಗೊಳ್ಳಲು ಧರ್ಮಪುರಿಗೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಜನವರಿಯಲ್ಲಿ ತಮ್ಮ ಅಭಿಮಾನಿಗಳ ಜೊತೆ ರಜಿನಿಕಾಂತ್ ಫೋಟೊಶೂಟ್ ಒಂದನ್ನು ನಡೆಸಲಿದ್ದಾರೆ. ಈ ಸಂದರ್ಭ ಅವರು ತಮ್ಮ ರಾಜಕೀಯ ಪ್ರವೇಶ ಹಾಗು ಪಕ್ಷದ ಬಗ್ಗೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದವರು ಹೇಳಿದರು.
ಡಿಸೆಂಬರ್ 12ರಂದು ತಮ್ಮ ಹುಟ್ಟುಹಬ್ಬದ ದಿನ ರಜಿನಿ ಯಾವುದೇ ಘೋಷಣೆ ಮಾಡುವುದಿಲ್ಲ. ದೇಶದಲ್ಲಿರುವ ಎಲ್ಲರೂ ರಜಿನಿಕಾಂತ್ ರನ್ನು ಪ್ರೀತಿಸುತ್ತಾರೆ. ರಾಜಕೀಯಕ್ಕೆ ಬಂದರೆ ಅವರು ಜನರಿಗೆ ಒಳಿತಾಗುವ ಕೆಲಸವನ್ನಷ್ಟೇ ಮಾಡುತ್ತಾರೆ” ಎಂದರು.
Next Story





