ಹಸಿರು ಬಣ್ಣ ಸ್ವಾಭಿಮಾನದ ಸಂಕೇತ: ಕುರುಬೂರು ಶಾಂತಕುಮಾರ್
ಬೆಂಗಳೂರು, ನ.29: ಹಸಿರು ಬಣ್ಣ ಸ್ವಾಭಿಮಾನದ ಸಂಕೇತವಾಗಿದ್ದು, ನಾವು ಹಸಿರು ಬಣ್ಣದ ಶಾಲು ಬದಲಾಯಿಸುವುದಿಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಸಂಘಟನೆಗಳು ಬಣ್ಣ ಬದಲಾವಣೆ ಮಾಡಿಕೊಳ್ಳಬಹುದು. ಆದರೆ, ನಾವು ಹಸಿರು ಬಣ್ಣದ ಶಾಲನ್ನು ಬದಲಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ರೀತಿಯೆ ಮಾಡಿ ಎಂದು ಕೆಲವು ಸಂಘಟನೆಗಳು ನಮಗೆ ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ಸಂಘಟನೆಗಳಿಗೆ ಅವರದೆ ಆದ ಹಕ್ಕುಗಳಿವೆ. ಹಸಿರು ಶಾಲನ್ನು ಧರಿಸಿಕೊಂಡು ಕೆಲವರು ರೈತರಿಗೆ ಮೋಸ ಮಾಡುತ್ತಿದ್ದಾರೆ. ಅಂತಹವರನ್ನು ಕಂಡು ಹಿಡಿದು ಸಂಘದಿಂದ ಹೊರ ಹಾಕುತ್ತೇವೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
Next Story





