ಬ್ರಹ್ಮಾವರ : ದೈವಸ್ಥಾನದ ಹುಂಡಿ ಹಣ ಕಳವು
ಬ್ರಹ್ಮಾವರ, ನ.29: ಉಪ್ಪೂರು ಗ್ರಾಮದ ಅಮ್ಮುಂಜೆ ಸರಸ್ವತಿ ನಗರದ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ನ.28ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ದೈವಸ್ಥಾನದ ಮುಖ್ಯ ಬಾಗಿಲು ಮತ್ತು ಗರ್ಭಗುಡಿಯ ಬಾಗಿಲಿನ ಬೀಗದ ಕೊಂಡಿಯನ್ನು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ, ಕಾಣಿಕೆ ಹುಂಡಿ ಮತ್ತು ಮುಖ್ಯದ್ವಾರದ ಬಳಿ ಇದ್ದ ಕಾಣಿಕೆ ಹುಂಡಿಯನ್ನು ತೆರೆದು 8000ರೂ. ಹಣ ಕಳವು ಮಾಡಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





