ಬೈಕ್ ಪಲ್ಟಿ: ಸಹಸವಾರ ಮೃತ್ಯು

ಬೈಂದೂರು, ನ.29: ಬೈಕೊಂದು ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ ಸಹಸವಾರ ಮೃತಪಟ್ಟ ಘಟನೆ ನ.28ರಂದು ಸಂಜೆ ಅರೆಹೊಳೆ ಬೈಪಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಕಿರಿಮಂಜೇಶ್ವರ ಗ್ರಾಮದ ಮೊಹಿದೀನ್ ಎಂದು ಗುರುತಿಸಲಾಗಿದೆ. ಇವರು ತನ್ನ ಮಗ ಶಕೀಲ್ ಎಂಬಾತನೊಂದಿಗೆ ಬೈಕಿನಲ್ಲಿ ಹಿಂಬದಿ ಸವಾರರಾಗಿ ಕಿರಿಮಂಜೇಶ್ವರ ಕಡೆಯಿಂದ ನಾವುಂದ ಕಡೆಗೆ ಹೋಗುತ್ತಿದ್ದಾಗ ಕುಂದಾಪುರ ಕಡೆಯಿಂದ ಬರುತ್ತಿದ್ದ ಲಾರಿಯನ್ನು ಕಂಡು ಶಕೀಲ್ ಬೈಕ್‌ನ್ನು ಎಡಬದಿಗೆ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದರೆನ್ನಲಾಗಿದೆ. ಇದರಿಂದ ಬೈಕ್ ಹತೋಟಿ ತಪ್ಪಿರಸ್ತೆಗೆ ಮಗುಚಿ ಬಿತ್ತು. ಆಗ ಹಿಂಬದಿಯಲ್ಲಿದ್ದ ಮೊಹೀದಿನ್ ರವರ ತಲೆ ರಸ್ತೆಯ ಡಿವೈಡರ್ ಬಡಿದು ಗಂಭೀರವಾಗಿ ಗಾಯಗೊಂಡರು.
ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೊಹೀದಿನ್ ಚಿಕಿತ್ಸೆ ಫಲಕಾರಿ ಯಾಗದೆ ರಾತ್ರಿ 11.50ರ ಸುಮಾರಿಗೆ ಮೃತಪಟ್ಟರೆಂದು ಪೊಲೀಸರು ತಿಳಿಸಿ ದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





