ಟ್ವಿಟರ್‌ನಲ್ಲಿ ಮುಸ್ಲಿಂ ವಿರೋಧಿ ವಿಡಿಯೋ ರಿಟ್ವೀಟ್ ಮಾಡಿದ ಟ್ರಂಪ್

ವಾಶಿಂಗ್ಟನ್, ನ. 29: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಟ್ವಿಟರ್‌ನಲ್ಲಿ ಮುಸ್ಲಿಂ ವಿರೋಧಿ ವೀಡಿಯೊಗಳನ್ನು ಹಾಕಿದ್ದಾರೆ. ಈ ವೀಡಿಯೊಗಳನ್ನು ಮೂಲತಃ ಬ್ರಿಟನ್‌ನ ಕಡು ಬಲಪಂಥೀಯ ‘ಬ್ರಿಟನ್ ಫಸ್ಟ್’ ಪಕ್ಷದ ನಾಯಕರೊಬ್ಬರು ಟ್ವಿಟರ್‌ನಲ್ಲಿ ಹಾಕಿದ್ದರು.
ಮುಸ್ಲಿಮರೆಂದು ಹೇಳಲಾದ ಗುಂಪೊಂದು ಬಾಲಕನೊಬ್ಬನನ್ನು ಹೊಡೆದು ಕೊಲ್ಲುವುದನ್ನು ಹಾಗೂ ‘ಕ್ರೈಸ್ತ ವಿಗ್ರಹವೊಂದನ್ನು ನಾಶಪಡಿಸುವುದನ್ನು’ ಈ ವೀಡಿಯೊಗಳು ತೋರಿಸುತ್ತವೆ.
ಬ್ರಿಟನ್ ಫಸ್ಟ್ ಪಕ್ಷದ ನಾಯಕ ಜೇಡ ಫ್ರಾನ್ಸನ್‌ರನ್ನು ಸೆಪ್ಟಂಬರ್‌ನಲ್ಲಿ ಬಂಧಿಸಿ, ಅವರ ವಿರುದ್ಧ ಕರಪತ್ರಗಳನ್ನು ಹಂಚುವ ಹಾಗೂ ಇಂಟರ್‌ನೆಟ್‌ನಲ್ಲಿ ವೀಡಿಯೊಗಳನ್ನು ಹಾಕಿ ಧಾರ್ಮಿಕ ಸಹಿಷ್ಣುತೆಯನ್ನು ಹಾಳುಗೆಡವಿದ ಆರೋಪಗಳನ್ನು ಹೊರಿಸಲಾಗಿತ್ತು.
Next Story





