ಬಾಲಿ: 3ನೆ ದಿನವೂ ವಿಮಾನ ನಿಲ್ದಾಣ ಬಂದ್

ಇಂಡೋನೇಶ್ಯ, ನ. 29: ಇಂಡೋನೇಶ್ಯದ ಬಾಲಿ ದ್ವೀಪದಲ್ಲಿರುವ ಜ್ವಾಲಾಮುಖಿ ಪರ್ವತ ವೌಂಟ್ ಅಗಂಗ್‌ನಿಂದ ಬೂದಿಯ ಪ್ರವಾಹ ಇನ್ನೂ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ, ಮೂರನೆ ದಿನವಾದ ಬುಧವಾರವೂ ಪ್ರವಾಸಿ ದ್ವೀಪದ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
ಮೌಂಟ್ ಅಗಂಗ್ ಜ್ವಾಲಾಮುಖಿ ಪರ್ವತ ಯಾವಾಗ ಬೇಕಾದರೂ ಸಿಡಿಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಜ್ವಾಲಾಮುಖಿಯಿಂದ ಚಿಮ್ಮುತ್ತಿರುವ ಬೂದಿ ಮಿಶ್ರಿತ ದಟ್ಟ ಹೊಗೆಯು ಹಲವು ಕಿಲೋ ಮೀಟರ್‌ನಷ್ಟು ಎತ್ತರಕ್ಕೆ ಆಕಾಶದಲ್ಲಿ ವ್ಯಾಪಿಸಿದೆ.
ಮೂರು ದಿನಗಳ ಅವಧಿಯಲ್ಲಿ ನೂರಾರು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಸುಮಾರು 1.20 ಲಕ್ಷ ಪ್ರವಾಸಿಗರು ಬಾಲಿ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
Next Story





