ಬೆಂಗಳೂರಿಗೆ ಪಂಕಜ್ ಆಗಮನ
ಬೆಂಗಳೂರು, ನ.29: ದೋಹಾದಲ್ಲಿ 18ನೇ ವರ್ಲ್ಡ್ ಚಾಂಪಿಯನ್ಶಿಪ್ ಕಿರೀಟ ಜಯಿಸಿದ ಬಿಲಿಯರ್ಡ್ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಅವರು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂದಿಳಿದರು. ಪಂಕಜ್ ಅಡ್ವಾಣಿ ಅವರನ್ನು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಐಬಿಎಸ್ಎಫ್ ವರ್ಲ್ಡ್ ಸ್ನೂಕರ್ ಚಾಂಪಿಯನ್ಶಿಪ್ನಲ್ಲಿ ಸೋಮವಾರ ಪಂಕಜ್ ಅಡ್ವಾಣಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಅಲ್ ಅರಬಿ ಸ್ಪೋರ್ಟ್ಸ್ಕ್ಲಬ್ನಲ್ಲಿ ನಡೆದ ಫೈನಲ್ನಲ್ಲಿ ಅಡ್ವಾಣಿ ಅವರು ಇರಾನ್ನ ಆಮಿರ್ ಸಾರ್ಕೊಶ್ರನ್ನು 8-2 ಫ್ರೇಮ್ಗಳಿಂದ ಮಣಿಸಿ ಪ್ರಶಸ್ತಿ ಯನ್ನು ಬಾಚಿಕೊಂಡಿದ್ದರು.
Next Story