ದತ್ತ ಜಯಂತಿ: ಪೊಲೀಸ್ ಬಂದೋಬಸ್ತ್
ಮೂಡಿಗೆರೆ, ನ.30: ದತ್ತ ಜಯಂತಿ ಹಿನ್ನೆಲೆ ತಾಲೂಕಿನಲ್ಲಿ ಪೊಲೀಸ್ ಬಂದೋಬಸ್ತ್ ಚುರುಕುಗೊಂಡಿದ್ದು, ಡಿ.1 ರಿಂದ 3 ರವರೆಗೆ ಪಟ್ಟಣದ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಜನವಸತಿ ಪ್ರದೇಶದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮ ವಹಿಸಲಾಗುತ್ತಿದೆ ಎಂದು ಮೂಡಿಗೆರೆ ಸಿಪಿಐ ಜಗದೀಶ್ ತಿಳಿಸಿದ್ದಾರೆ.
ಗುರುವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಂದೂಬಸ್ತ್ ಸಲುವಾಗಿ 1 ಅಡಿಷಿನಲ್ ಎಸ್ಪಿ, 1 ಡಿವೈಎಸ್ಪಿ, 1 ಸಿಪಿಐ, 10 ಪಿಎಸ್ಸೈ, 15 ಎಎಸ್ಸೈ, 130 ಎಚ್‍ಸಿಪಿಸಿ, 10 ಡಬ್ಲ್ಯುಪಿಸಿ, 20 ಹೋಮ್ ಗಾಡ್ರ್ಸ್, 1 ತುಕಡಿ ಕೆಎಸ್‍ಆರ್‍ಪಿ, 1 ಡಿಆರ್ ತುಕಡಿ ನಿಯೋಜಿಸಲಾಗಿದೆ. ಅಲ್ಲದೆ, 3 ವಿಶೇಷ ಚೆಕ್ ಪೋಸ್ಟ್ ತೆರೆಯಲಾಗಿದೆ ಎಂದು ಹೇಳಿದ್ದಾರೆ.
Next Story





