ಡಿ.17-18: ಸಿಪಿಎಂ ಪಕ್ಷದ ಜಿಲ್ಲಾ ಸಮ್ಮೇಳನ
ಮಂಗಳೂರು,ನ.30: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ 22ನೆ ದ.ಕ. ಜಿಲ್ಲಾ ಸಮ್ಮೇಳನ ಡಿ.17,18ರಂದು ನಗರದ ಬೋಳಾರದ ಎಸ್.ಕೆ.ಟೈಲ್ ವರ್ಕರ್ಸ್ ಯೂನಿಯನ್‌ನ ಸಭಾಂಗಣದಲ್ಲಿ ನಡೆಯಲಿದೆ.
ಎಲ್ಲ ಪ್ರಾಥಮಿಕ ಶಾಖಾ ಮಟ್ಟದ ಸಮ್ಮೇಳನ ನಡೆದು ಅಲ್ಲಿಂದ ಆಯ್ಕೆಯಾದ ಪ್ರತಿನಿಧಿಗಳು ಸೇರಿ ಎಲ್ಲ ಸ್ಥಳೀಯ ಮಟ್ಟದ ಸಮ್ಮೇಳನ ನಡೆಸಿದ್ದಾರೆ. ಅಲ್ಲಿಂದ ಆಯ್ಕೆಯಾದ ಸದಸ್ಯರು ಜಿಲ್ಲಾ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಸಮ್ಮೇಳನವನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಕಾ.ಜಿ.ವಿ.ಶ್ರೀರಾಮರೆಡ್ಡಿ ಉದ್ಘಾಟಿಸಲಿದ್ದಾರೆ. ಕಾ.ಕೆ.ಆರ್.ಶ್ರೀಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





