ಮಾದಕವಸ್ತು ಮಾರಾಟ: ಮೂವರ ಬಂಧನ
ಬೆಂಗಳೂರು, ನ.30: ಮಾದಕವಸ್ತು ಹೆರಾಯಿನ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರು ಬಂಧಿಸಿ 5.20 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಮ್ಮನಹಳ್ಳಿಯ ಮುಹಮ್ಮದ್ ಇಝಾಝ್(24), ಶಿವಾಜಿನಗರದ ಸೆಯ್ಯದ್ ಝಿಯಾ(28), ರೆಹಮಾನ್(43)ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ.
ಬಂಧಿತರಿಂದ 103 ಗ್ರಾಂ ಹೆರಾಯಿನ್ 5 ಸಾವಿರ ನಗದು ಬೈಕ್ ಸೇರಿ 5ಲಕ್ಷ 20 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಸುನೀಲ್‌ಕುಮಾರ್ ತಿಳಿಸಿದರು.
ಆರೋಪಿಗಳು ಮಣಿಪುರದ ಅಮೀರ್ ಎಂಬಾತನಿಂದ ಹೆರಾಯಿನ್ ಖರೀದಿಸಿಕೊಂಡು ನಗರಕ್ಕೆ ಬಂದು ಚಿಕ್ಕ ಪ್ಯಾಕ್‌ಗಳಾಗಿ ಕಟ್ಟಿ ನಗರದ ವಿವಿದೆಢೆ ಸಂಚರಿಸಿ ಹೆಚ್ಚಿ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದರು.
ಕಾರ್ಯಾಚರಣೆ ನಡೆಸಿದ ಪುಲಿಕೇಶಿನಗರ ಉಪವಿಭಾಗದ ಕಮರ್ಷಿಯಲ್ ಸ್ಟ್ರೀಟ್ ಠಾಣಾ ಪೊಲೀಸರನ್ನು ಆಯುಕ್ತರು ಶ್ಲಾಘಿಸಿದರು.
Next Story





