ಫೆಲೋಶಿಪ್‌ಗಾಗಿ ಅರ್ಜಿ ಅಹ್ವಾನ
ಮಂಗಳೂರು, ನ.30: ಕರ್ನಾಟಕ ನಾಟಕ ಅಕಾಡಮಿಯು ತನ್ನ ವಿಶೇಷ ಘಟಕದ ಯೋಜನೆಯಡಿ 15 ಜನ ಪರಿಶಿಷ್ಟ ಜಾತಿ ಹಾಗೂ 30 ಜನ ಪರಿಶಿಷ್ಟ ಪಂಗಡಗಳ ಕಲಾವಿದರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಅಧ್ಯಯನ ಪ್ರಬಂಧ ರಚನಾ ಫೆಲೋಶಿಪ್ ಕೊಡಲಿದೆ. ಪ್ರತಿ ಫೆಲೋಶಿಪ್‌ಗೆ 1 ಲಕ್ಷ ರೂ. ಸಂಭಾವನೆ ನೀಡಲಾಗುತ್ತದೆ.
ಆಸಕ್ತರು ಪ್ರಬಂಧಗಳ ಕುರಿತ ವಿಷಯಗಳು, ನಿಬಂಧನೆಗಳು ಮತ್ತು ವಿವರಗಳಿಗಾಗಿ ಸೂಕ್ತ ಅಂಚೆ ಚೀಟಿ ಹಚ್ಚಿದ ಹೆಚ್ಚುವರಿ ಲಕೋಟೆಯ ಮೇಲೆ ಸ್ವಯಂ ವಿಳಾಸ ಬರೆದು ಮತ್ತು ಸ್ವ ವಿವರಗಳನ್ನು ಜೊತೆಗೆ ಲಗತ್ತಿಸಿ, ಅಂಚೆ ಮೂಲಕ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡಮಿ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-560002 ಈ ವಿಳಾಸಕ್ಕೆ ಡಿ.7ರ ಒಳಗೆ ಕಳುಹಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
...
Next Story





