ನೀರಿನ ಸಂಪ್‍ಗೆ ಬಿದ್ದು ಮಹಿಳೆ ಮೃತ್ಯು
ಮೈಸೂರು, ನ.30: ಮುಕ್ಕಾಲುಭಾಗ ನೀರಿದ್ದ ಸಂಪಿನೊಳಗೆ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಕುವೆಂಪುನಗರದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ವಸಂತ ಎಂಬವರ ಪತ್ನಿ ವಿನುತ ಎಂದು ಗುರುತಿಸಲಾಗಿದ್ದು, ಇವರು ಚಾಮರಾಜನಗರದ ಕೆ.ಎಸ್.ಆರ್.ಟಿಸಿಯಲ್ಲಿ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕುವೆಂಪುನಗರದ ಬ್ಲಾಕ್ ನಲ್ಲಿ ತಮ್ಮ ಮನೆಯ ಸಂಪಿನೊಳಗಡೆ ಬಿದ್ದಿದ್ದಾರೆ. ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ಅಕ್ಕಪಕ್ಕದ ಮನೆಯವರೊಂದಿಗೆ ಮಾತನಾಡಿಕೊಂಡಿದ್ದರು. ಬಳಿಕ ಕಾಣಿಸಲಿಲ್ಲ. ತೆರೆದ ಸಂಪಿನೊಳಗಿಂದ ಯಾರೋ ಬಿದ್ದಿರುವುದು ಕಾಣಿಸಿದಂತಾಗಿ ಕುವೆಂಪುನಗರದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಕುವೆಂಪುನಗರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





