ಪ್ರವಾಸಕ್ಕೆಂದು ಬಂದಿದ್ದ ಮಹಿಳೆ ಹೃದಯಾಘಾದಿಂದ ಮೃತ್ಯು
ಮೈಸೂರು, ನ.30: ದಿಲ್ಲಿಯಿಂದ ಮೈಸೂರಿಗೆ ಪ್ರವಾಸಕ್ಕೆಂದು ತನ್ನ ಬಂಧುಗಳೊಂದಿಗೆ ಬಂದಿದ್ದ ಮಹಿಳೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ಚಂದ್ರಪ್ರಭಾ ಬೆಹೆನ್ (48) ಎಂಬ ದಿಲ್ಲಿ ಮೂಲದ ಮಹಿಳೆ ಎಂದು ಗುರುತಿಸಲಾಗಿದ್ದು, ಇವರು ತನ್ನ ಬಂಧುಗಳೊಂದಿಗೆ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದಾರೆ.
ನಗರದ ಶ್ರೀಹರ್ಷ ರಸ್ತೆಯಲ್ಲಿರುವ ಹೊಟೇಲ್ ನಲ್ಲಿ ಬೆಹೆನ್ ರವರು ರೂಮ್ ಪಡೆದು ವಾಸ್ತವ್ಯ ಹೂಡಿದ್ದರು. ಆದರೆ ಗುರುವಾರ ಬೆಳಗ್ಗೆ ಎಷ್ಟು ಹೊತ್ತಾದರೂ ಹೊರಗೆ ಬಾರದ ಕಾರಣ ರೂಮಿಗೆ ಹೋಗಿ ನೋಡಿದಾಗ ಅವರು ಹೃದಯಾಘಾತದಿಂದ ಮೃತಪಟ್ಟಿರುವುದು ತಿಳಿದು ಬಂದಿದೆ.
ಈ ಸಂಬಂಧ ಲಷ್ಕರ್ ಪೊಲೀಸ್ ಠಾಣಾ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ವಾರೀಸುದಾರರಿಗೆ ಒಪ್ಪಿಸಿದ್ದಾರೆ.
Next Story





