ಜೇನು ದಾಳಿ: ವ್ಯಕ್ತಿ ಮೃತ್ಯು
ಮಂಡ್ಯ,ನ.30: ಹೆಜ್ಜೇನು ದಾಳಿಯಿಂದ ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಮಳವಳ್ಳಿ ತಾಲೂಕು ಬೆಳಕವಾಡಿಯಲ್ಲಿ ಗುರುವಾರ ಸಂಜೆ ನಡೆದಿದೆ.
ಮೈಸೂರು ಒಂಟಿಕೊಪ್ಪಲು ಬಡಾವಣೆಯ ಹೊಂಬಳೇಶ್ ಅವರ ಪುತ್ರ ಬಾಬು(58) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬೆಳಕವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಯಾಗಿ ಕೆಲಸ ನಿರ್ವಹಿಸುತ್ತಿದ್ದ ಬಾಬು ಅವರು, ಅಕ್ಕ ಜಯಲಕ್ಷ್ಮಿ ಮೃತಪಟ್ಟ ಬಳಿಕ ಕೇಂದ್ರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಗ್ರಾಮದ ಹಳೆ ಗ್ರಾಮ ಪಂಚಾಯತ್ ಕಟ್ಟಡ ಬಳಿ ತೆರಳುತ್ತಿದ್ದಾಗ ಜೇನು ದಾಳಿಯಿಂದ ಬಾಬು ಮೃತಪಟ್ಟರೆಂದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





