ಅತ್ಯಾಚಾರ ಆರೋಪ: ಯುವತಿ ದೂರು
ಮಂಡ್ಯ, ನ.30: ಪಾಂಡವಪುರ ತಾಲೂಕು ಪಟ್ಟಸೋಮನಹಳ್ಳಿಯಲ್ಲಿ ಸವರ್ಣೀಯ ಯುವಕ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ದಲಿತ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ತಾಯಿ ಕಾರ್ಯನಿಮಿತ್ತ ಮೈಸೂರಿಗೆ ತೆರಳಿದ್ದಾಗ, ಬುಧವಾರ ತಡರಾತ್ರಿ ಆಗಮಿಸಿದ ಕಯಕಪ್ಪ ಅವರ ಪುತ್ರ ಕುಮಾರ್, ಏಕಾಏಕಿ ಮನೆಗೆ ನುಗ್ಗಿ ಅತ್ಯಾಚಾರವೆಸಗಿ ಕೊಲೆ ಬೆದರಿಕೆ ಹಾಕಿದ ಎಂದು ಯುವತಿ ಆರೋಪಿಸಿದ್ದಾರೆ.
ಗುರುವಾರ ಮಧ್ಯಾಹ್ನ ತನ್ನ ತಾಯಿಯೊಂದಿಗೆ ಪಾಂಡವಪುರ ಪೊಲೀಸ್ ಠಾಣೆಗೆ ತೆರಳಿದ ಯುವತಿ ಕುಮಾರ್ ವಿರುದ್ಧ ದೂರು ನೀಡಿದ್ದು, ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
Next Story





