ಭಾರೀ ಮಳೆಗೆ ತಮಿಳುನಾಡು, ಕೇರಳ ತತ್ತರ: 8 ಮಂದಿ ಮೃತ್ಯು
ಲಕ್ಷದ್ವೀಪದತ್ತ ಸಾಗಿದ ‘ಓಕಿ’ ಚಂಡಮಾರುತ

ತಿರುವನಂತಪುರಂ, ನ.30: ತಮಿಳುನಾಡು ಹಾಗು ಕೇರಳದ ದಕ್ಷಿಣ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ 8ಮಂದಿ ಮೃತಪಟ್ಟಿದ್ದಾರೆ.
ಚಂಡಮಾರುತದ ಭೀತಿಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಮಿಳುನಾಡು ಹಾಗು ಕೇರಳ ರಾಜ್ಯ ಸರಕಾರಗಳು ಸಂಬಂಧಪಟ್ಟವರಿಗೆ ಸೂಚಿಸಿದೆ. ಮುಂದಿನ 24 ಗಂಟೆಗಳಲ್ಲಿ ಎರಡೂ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಚಂಡಮಾರುತವು ಲಕ್ಷದ್ವೀಪದತ್ತ ಸಾಗಿತ್ತು, ಡಿಸೆಂಬರ್ 2ರಂದು ದ್ವೀಪಕ್ಕೆ ಅಪ್ಪಳಿಸಲಿದೆ. ಮುಂದಿನ 24 ಗಂಟೆಗಳಲ್ಲಿ ಮೀನುಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
Next Story





