ಮುಂದಿನ ವರ್ಷ ಮಾನವೀಯ ಬಿಕ್ಕಟ್ಟು ಉಲ್ಬಣ: ವರದಿ

ಜಿನೇವ, ನ. 30: ಜಗತ್ತಿನಾದ್ಯಂತ ನಡೆಯುತ್ತಿರುವ ಮಾನವೀಯ ಬಿಕ್ಕಟ್ಟುಗಳು ಮುಂದಿನ ವರ್ಷ ಇನ್ನಷ್ಟು ಉಲ್ಬಣಗೊಳ್ಳುತ್ತವೆ ಎಂದು ಎಸಿಎಪಿಎಸ್ ಎಂಬ ಜಿನೇವದಲ್ಲಿ ನೆಲೆ ಹೊಂದಿರುವ ಸಂಸ್ಥೆಯೊಂದು ತನ್ನ ವರದಿಯಲ್ಲಿ ಹೇಳಿದೆ.
‘‘2017 ಉತ್ತಮವಾಗಿರಲಿಲ್ಲ. ಆದರೆ, 2018ರ ನಿರೀಕ್ಷೆಗಳೂ ಇದಕ್ಕಿಂತ ಉತ್ತಮವಾಗಿಲ್ಲ. ಅಫ್ಘಾನಿಸ್ತಾನ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಲಿಬಿಯ, ಇಥಿಯೋಪಿಯ, ಮಾಲಿ, ಸೊಮಾಲಿಯ ಮತ್ತು ಸಿರಿಯಗಳಲ್ಲಿ ಮುಂದಿನ ವರ್ಷ ಹಿಂಸೆ ಮತ್ತು ಅಸ್ಥಿರತೆ ಹದಗೆಡುತ್ತದೆ’’ ಎಂದು ವರದಿ ತಿಳಿಸಿದೆ.
Next Story





