ಅಮೆರಿಕ ದಾಳಿಗಳಲ್ಲಿ 800 ನಾಗರಿಕರ ಸಾವು: ವರದಿ
ಬಗ್ದಾದ್, ನ. 30: ಐಸಿಸ್ ವಿರುದ್ಧ ಹೋರಾಡುತ್ತಿರುವ ಅಮೆರಿಕ ನೇತೃತ್ವದ ಮಿತ್ರಕೂಟ 2014ರಿಂದ ನಡೆಸಿದ ದಾಳಿಗಳಲ್ಲಿ ಇರಾಕ್ ಮತ್ತು ಸಿರಿಯಗಳಲ್ಲಿ ಕನಿಷ್ಠ 800 ನಾಗರಿಕರು ಹತರಾಗಿದ್ದಾರೆ ಎಂದು ಮಿತ್ರಕೂಟ ಗುರುವಾರ ಬಿಡುಗಡೆ ಮಾಡಿದ ವರದಿಯೊಂದು ತಿಳಿಸಿದೆ.
ಆದರೆ, ಈ ಅಂಕಿಸಂಖ್ಯೆಗಳು ನಿಗಾ ಗುಂಪುಗಳು ನೀಡಿರುವ ಅಂಕಿಸಂಖ್ಯೆಗಳಿಗಿಂತ ತುಂಬಾ ಕಡಿಮೆಯಾಗಿವೆ.
ಮಿತ್ರಕೂಟದ ವಾಯು ದಾಳಿಗಳಲ್ಲಿ ಕನಿಷ್ಠ 5,961 ನಾಗರಿಕರು ಮೃತಪಟ್ಟಿದ್ದಾರೆ ಎಂಬುದಾಗಿ ವೀಕ್ಷಣಾ ಸಂಸ್ಥೆ ‘ಏರ್ವಾರ್’ ಹೇಳಿದೆ.
Next Story