ಹನೂರು: ಉದ್ಯೋಗ ಖಾತ್ರಿ ಯೋಜನೆಯ ಗ್ರಾಮ ಸಭೆ

ಹನೂರು, ನ.30: ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಎಸ್ಸಿ, ಎಸ್ಟಿ ವರ್ಗದವರು ಹಾಗೂ ಕೂಲಿ ಕಾರ್ಮಿಕರು ಹೆಚ್ಚು ವಾಸಿಸುವ ಈ ಗ್ರಾಮದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುಷ್ಠಾನಗೂಂಡಿರುವ ಕಾಮಗಾರಿಗಳಲ್ಲಿ ಗ್ರಾಮದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಮಂಗಲ ಗ್ರಾಮಸ್ಥರು ಆರೋಪಿಸಿದ್ದಾರೆ.
ಹನೂರು ಸಮೀಪದ ಮಂಗಲ ಗ್ರಾಮ ಪಂಚಾಯತ್ ನಲ್ಲಿ ಗುರುವಾರ ನೆಡೆದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, 2017-18 ಸಾಲಿನಲ್ಲಿ ಅನುಷ್ಠಾನಗೂಂಡಿರುವ 45 ಕಾಮಗಾರಿಗಳಲ್ಲಿ ಬೆರಳಣಿಕಯಷ್ಟು ಮಾತ್ರ ಸಾಮಾಜಿಕ ಕಾಮಗಾರಿಗಳಾಗಿವೆ. ಗ್ರಾಮದ ಅಭಿವೃದ್ಧಿಗೆ ಸಂಬಂದಿಸಿದ ಯಾವುದೇ ಕಾಮಾಗಾರಿಗಳನ್ನು ಕೈಗೂಂಡಿಲ್ಲ. ಮಂಗಲ ಗ್ರಾಮದ 1 ವಾರ್ಡಗೆ ಸಮರ್ಪಕವಾದ ರೀತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ ಚರಂಡಿಯನ್ನು ನಿರ್ಮಿಸಿಲ್ಲ, ಸಮರ್ಪಕವಾದ ರೀತಿಯಲ್ಲಿ ಕ್ರಿಯಾ ಯೋಜನೆ ರೂಪಿಸಿ ಗ್ರಾಮವನ್ನು ಅಬಿವೃದ್ಧಿಗೊಳಿಸಲು ಗ್ರಾಮ ಪಂಚಾಯತ್, ಆಡಳಿತ ವರ್ಗ ವಿಫಲವಾಗಿದೆ ಎಂದು ದೂರಿದರು.
ಗ್ರಾಪಂ ಸದಸ್ಯರು ಗೈರು: ಗ್ರಾಮ ಪಂಚಾಯತ್ ಗಳಲ್ಲಿ ನೆಡೆಯುವ ಸಭೆಗಳಿಗೆ ಪ್ರಮುಖ ವಾರ್ಡಗಳ ಗ್ರಾಪಂ ಸದಸ್ಯರು ಭಾಗವಹಿಸುವುದಿಲ್ಲ. ಅಂತಹವರ ವಿರುದ್ಧ ಕ್ರಮ ಕೈಗೂಳ್ಳಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮೌಖಿಕವಾಗಿ ದೂರಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಮೂರ್ತಿ, ನೋಡಲ್ ಅಧಿಕಾರಿ ಮಹದೇವು, ತಾಲೂಕು ಸಂಯೋಜಕ ಮನೋಹರ್, ಪಿಡಿಒ ಶಿವಪ್ರಸಾದ್ ಇನ್ನಿತರರು ಹಾಜರಿದ್ದರು.





