ಗ್ರಾಮಸ್ಥರ ಸಹಕಾರವಿದ್ದರೆ ಗ್ರಾಮಗಳ ಅಭಿವೃದ್ದಿ ಸಾಧ್ಯ: ಸಚಿವ ಯು.ಟಿ ಖಾದರ್
ಇರಾ: ಕಾಂಕ್ರೀಟು ರಸ್ತೆ, ತಡೆಗೋಡೆ ಉದ್ಘಾಟನೆ
.jpg)
ಕೊಣಾಜೆ,ನ.30: ಸರಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಗೊಂಡು ಯಶಸ್ವಿಯಾಗಬೇಕಾದರೆ ಗ್ರಾಮಸ್ಥರು ಸಹಭಾಗಿತ್ವ, ಸಹಕಾರವೂ ಅಗತ್ಯವಾಗಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿರುವ ಕಾಂಗ್ರೆಸ್ ಸರಕಾರವು ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಬಿವೃದ್ದಿಗೆ ಹೆಚ್ಚಿನ ಆಧ್ಯತೆ ನೀಡುವುದರ ಮೂಲಕ ಗಾಂಧೀಜಿಯವರ ಕಲ್ಪನೆಯಾದ ಗ್ರಾಮಸ್ವರಾಜ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಿ ಮುನ್ನಡೆಯುತ್ತಿದೆ ಎಂದು ಸಚಿವ ಯು.ಟಿ.ಖಾದರ್ ಅವರು ಹೇಳಿದರು.
ಇರಾ ಗ್ರಾಮದ ಸೂತ್ರಬೈಲು-ಕುಕ್ಕಾಜೆ ಮುಖ್ಯ ರಸ್ತೆಯ ಕುಕ್ಕಾಜೆ ಸೈಟ್-ಹತ್ತು ಕಳಸೆ ರಸ್ತೆ ಕಾಂಕ್ರೀಟೀಕರಣ ಮತ್ತು ತಡೆಗೋಡೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅಲ್ಲದೆ ಇನ್ನಷ್ಟು ಅಭಿವೃದ್ದಿ ಕಾರ್ಯಗಳು ಜನರ ಮೂಲಭೂತ ಅವಶ್ಯಕತೆಗಳಿಗುಣವಾಗಿ ನಡೆಯಲಿದೆ ಎಂದು ಹೇಳಿದರು.
ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಆರ್ ಕರ್ಕೇರ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ ಈ ಸಂದರ್ಭದಲ್ಲಿ ಮಾತನಾಡಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ನಾಸಿರ್ ನಡುಪದವು, ಡಿ,ಕೆ ಹಂಝ ಕುಕ್ಕಾಜೆ, ಅಬೂಬಕ್ಕರ್ ಸಜಿಪ, ಗ್ರಾಮ ಪಂಚಾಯಿತಿ ಸದಸ್ಯರಾದ ದೇವದಾಸ ಅಡಪ, ಮೊಯಿದಿನ್ ಕುಂಞ, ಅಬ್ದುಲ್ ರಹಿಮಾನ್ ಮುದುಂಗಾರು, ನೆಬಿಸ, ಪಾರ್ವತಿ, ಸ್ಥಳೀಯರಾದ ರಾಜೇಶ್ ಶೆಟ್ಟಿ ಕುಕ್ಕಾಜೆ, ಸಿ.ಯಚ್ ಮಹಮ್ಮದ್, ವಿಶ್ವನಾಥ ಶೆಟ್ಟಿ, ಕಮಲಾಕ್ಷ, ಇಬ್ರಾಯಿಂ ಪತ್ತುಮುಡಿ, ಪೈಝಲ್, ಇಸ್ಮಾಯಿಲ್ ಇನ್ನಿತರರು ಉಪಸ್ಥಿತರಿದ್ದರು.
ಕಾಮಗಾರಿಗೆ ಅನುದಾನ ಒದಗಿಸಿದ ಸಚಿವರಾದ ಯು.ಟಿ ಖಾದರ್, ಜಮೀನಿನ ಸ್ಥಳದಾನ ಮಾಡಿದ ರಾಜೇಶ್ ಶೆಟ್ಟಿ ಕುಕ್ಕಾಜೆ, ಗುತ್ತಿಗೆಗಾರ ಅಶ್ರಫ್ ಮೂಲರಪಟ್ಣರವರನ್ನು ವೇದಿಕೆಯಲ್ಲಿ ಸನ್ಮಾಸಲಾಯಿತು.
ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಧನ್ಯವಾದ ಸಲ್ಲಿಸಿ, ನಝೀರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.







