191 ಎಸೆತಗಳಲ್ಲಿ ತ್ರಿಶತಕ ಸಿಡಿಸಿದ ದ. ಆಫ್ರಿಕ ದಾಂಡಿಗ
ಜೋಹಾನ್ಸ್‌ಬರ್ಗ್, ನ.30: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾರ್ಕೊ ಮರೈಸ್ ವೇಗವಾಗಿ ತ್ರಿಶತಕ ಸಿಡಿಸಿದ್ದು, ವಾರದೊಳಗೆ ವಿಶ್ವ ದಾಖಲೆ ನಿರ್ಮಿಸಿದ ದಕ್ಷಿಣ ಆಫ್ರಿಕದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
ಬಾರ್ಡರ್ ತಂಡದ 24ರ ಹರೆಯದ ಮಾರ್ಕೊ ಅವರು ಈಸ್ಟರ್ನ್ ಪ್ರಾವಿನ್ಸ್ ತಂಡದ ವಿರುದ್ಧ ಕೇವಲ 191 ಎಸೆತಗಳಲ್ಲಿ 35 ಬೌಂಡರಿ ಹಾಗೂ 13 ಸಿಕ್ಸರ್‌ಗಳ ಸಹಿತ ಔಟಾಗದೆ 300 ರನ್ ಗಳಿಸಿದರು. ದಕ್ಷಿಣ ಆಫ್ರಿಕದ ತ್ರಿದಿನ ಪ್ರಾವಿನ್ಶಿಯಲ್ ಸ್ಪರ್ಧೆಯಲ್ಲಿ ಮಾರ್ಕೊ ಈ ಸಾಧನೆ ಮಾಡಿದ್ದಾರೆ. 1921ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧ ಆಸ್ಟ್ರೇಲಿಯದ ಚಾರ್ಲಿ ಮಕರ್ಟನಿ 221 ಎಸೆತಗಳಲ್ಲಿ ತ್ರಿಶತಕ ಸಿಡಿಸಿದ್ದರು.
ಬಾರ್ಡರ್ 82 ರನ್‌ಗೆ 4 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗಿಳಿದಿದ್ದ ಮಾರ್ಕೊ ಬ್ರಾಡ್ಲಿ ವಿಲಿಯಮ್ಸ್(ಅಜೇಯ 113) ಅವರೊಂದಿಗೆ ಮುರಿಯದ ಜೊತೆಯಾಟದಲ್ಲಿ 428 ರನ್ ಸೇರಿಸಿದರು. ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಡ್ರಾನಲ್ಲಿ ಕೊನೆಗೊಂಡಿತು.
Next Story





