ಮೀಲಾದುನ್ನಬಿ: ಬಂಟ್ವಾಳ ತಾಲೂಕಿನಾದ್ಯಂತ ಸ್ವಲಾತ್ ಮೆರವಣಿಗೆ

ಬಂಟ್ವಾಳ, ಡಿ. 1: ಮೀಲಾದುನ್ನಬಿ ಪ್ರಯುಕ್ತ ಬಂಟ್ವಾಳ ತಾಲೂಕಿನಾದ್ಯಂತ ಬೆಳಗ್ಗೆಯಿಂದಲೇ ಸಂಭ್ರಮಾಚರಣೆ ಹಾಗೂ ಸ್ವಲಾತ್ ಮೆರವಣಿಗೆ ಆರಂಭ ಗೊಂಡಿತು. ಫರಂಗಿಪೇಟೆ, ಮಾರಿಪಳ್ಳ, ಫಜೀರು, ತುಂಬೆ, ವಳವೂರು, ತಲಪಾಡಿ, ಶಾಂತಿಅಂಗಡಿ, ಗೂಡಿನಬಳಿ ಬಿ.ಸಿ.ರೋಡ್. ಕೈಕಂಬ, ನಂದಾವರ
ಸೇರಿದಂತೆ ಮೊದಲಾದೆಡೆಗಳಲ್ಲಿ ಮೀಲಾದ್ ರ್ಯಾಲಿ ನಡೆದವು. ಉಳಿದ ಕೆಲವೆಡೆ ಜುಮಾ ಬಳಿಕ ರ್ಯಾಲಿ ಆರಂಭಗೊಂಡವು.
ತಲಪಾಡಿ: ಬದ್ರಿಯಾ ಜುಮಾ ಮಸೀದಿ ಹಾಗೂ ಧಾರ್ಮಿಕ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಮಸೀದಿಯ ಅಧ್ಯಕ್ಷ ಇದಿನಬ್ಬ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಖತೀಬ್‌ಸ್ವಾದಿಕ್ ಅರ್ಹರಿ ಅವರು ಮೀಲಾದುನ್ನಬಿ ಕುರಿತು ಪ್ರಸ್ತಾವನೆ ಗೈದರು. ಮಸೀದಿ ಆಡಳಿತ ಮಂಡಳಿಯ ಆರ್.ಕೆ. ಅಬೂಬಕರ್, ಅನ್ವರ್ ಕೆ.ಎಚ್., ಶಮೀರ್, ಬಿ.ಸಿ.ಲತೀಫ್, ರಝಾಕ್ ದಾರಿಮಿ, ರಫೀಕ್ ಮುಸ್ಲಿಯಾರ್, ಶಾಹುಲ್ ಬಿ.ಸಿ.ಆರ್., ನಾಸಿರ್, ಸಲಾಂ, ಸವಾದ್ ಮತ್ತಿತರರು ಉಪಸ್ಥಿತರಿದ್ದರು.
ಆಲಡ್ಕ: ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ನಡೆದ ಸ್ವಲಾತ್ ಮೆರವಣಿಗೆಯನ್ನು ಮಸೀದಿ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಉದ್ಘಾಟಿಸಿದರು. ಆಲಡ್ಕ ಮಸೀದಿಯಿಂದ ಹೊರಟ ಮೆರವಣಿಗೆ ನಂದಾವರ, ಮಾರ್ನಬೈಲ್, ಮೆಲ್ಕಾರ್ ಮಾರ್ಗವಾಗಿ ಸಾಗಿ ಬಂದು ಮತ್ತೆ ಆಲಡ್ಕ ಮಸೀದಿ ಸಮೀಪ ಸಮಾಪ್ತಿಗೊಂಡಿತು.
ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳಾದ ಅಬೂಬಕ್ಕರ್ ಬಿ., ಅಬೂಬಕ್ಕರ್ ರೆಂಗೇಲು, ಆಸಿಫ್ ಮೆಲ್ಕಾರ್, ಯೂಸುಫ್ ಬೋಗೋಡಿ ಮೊದಲಾ ದವರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಗುಡ್ಡೆಅಂಗಡಿ: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ ನಡೆದ ಸ್ವಲಾತ್ ಮೆರವಣಿಗೆಯನ್ನು ಮಸೀದಿ ಖತೀಬ್ ಉಸ್ಮಾನ್ ರಾಝಿ ಬಾಖವಿ ಅಲ್-ಹೈತಮಿ ಉದ್ಘಾಟಿಸಿದರು.
ಗುಡ್ಡೆಅಂಗಡಿ ಮಸೀದಿಯಿಂದ ಹೊರಟ ಮೆರವಣಿಗೆ ಮಾರ್ನಬೈಲ್, ನಂದಾವರ, ಆಲಡ್ಕ ಮಾರ್ಗವಾಗಿ ಸಾಗಿ ಬಂದು ಮತ್ತೆ ಗುಡ್ಡೆಅಂಗಡಿ ಮಸೀದಿ ಸಮೀಪ ಸಮಾಪ್ತಿಗೊಂಡಿತು. ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಉಮ್ಮರ್ ಫಾರೂಕ್, ಪದಾಧಿಕಾರಿಗಳಾದ ಬಶೀರ್ ಮೆಲ್ಕಾರ್, ಯಾಕೂಬ್ ಗುಡ್ಡೆಅಂಗಡಿ, ಅಬ್ದುಲ್ ಹಮೀದ್, ಅಬೂಬಕ್ಕರ್ ಮೆಲ್ಕಾರ್, ಹನೀಫ್ ಬೋಗೋಡಿ, ಮಜೀದ್ ಮೇಸ್ತ್ರಿ, ರಫೀಕ್ ಕೊಚ್ಚಿ, ಸಾದಿಕ್ ಬೋಗೋಡಿ, ಮಜೀದ್ ಡ್ರೈವರ್, ಇರ್ಶಾದ್ ಗುಡ್ಡೆಅಂಗಡಿ, ತೌಸೀಫ್ ಬೋಗೋಡಿ, ಸಿರಾಜ್ ಬೋಗೋಡಿ ಮೊದಲಾದವರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ನಂದಾವರ: ಪಾಣೆಮಂಗಳೂರು ಸಮೀಪದ ನಂದಾವರ ಕೇಂದ್ರ ಜುಮಾ ಮಸೀದಿ ಆಶ್ರಯದಲ್ಲಿ ನಡೆದ ಸ್ವಲಾತ್ ಮೆರವಣಿಗೆಯನ್ನು ಮಸೀದಿ ಖತೀಬ್ ಅಬ್ದುಲ್ ಮಜೀದ್ ದಾರಿಮಿ ತೋಡಾರು ಉದ್ಘಾಟಿಸಿದರು.
ಮಸೀದಿಯಿಂದ ಹೊರಟ ಮೆರವಣಿಗೆ ನಂದಾವರ, ಮಾರ್ನಬೈಲ್, ಮೆಲ್ಕಾರ್ ಮಾರ್ಗವಾಗಿ ಸಾಗಿ ಬಂದು ಮತ್ತೆ ಆಲಡ್ಕ ಮಸೀದಿ ಸಮೀಪ ಸಮಾಪ್ತಿ ಗೊಂಡಿತು. ಮಜೀದ್ ಫೈಝಿ ನಂದಾವರ, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಮೂಸಾ ಹಾಜಿ, ಗ್ರಾ.ಪಂ. ಮಾಜಿ ಸದಸ್ಯ ಶರೀಫ್ ನಂದಾವರ, ಸಿನಾನ್ ನಂದಾವರ ಮೊದಲಾದವರು ರ್ಯಾಲಿಯಲ್ಲಿ ಭಾಗವಹಿಸಿದ್ದರು.







