ಸಿಟ್ ತನಿಖೆ ಕೋರಿದ್ದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್
ನ್ಯಾಯಾಧೀಶರಿಗೆ ಲಂಚ ಪ್ರಕರಣ

ಹೊಸದಿಲ್ಲಿ, ಡಿ.1: ನ್ಯಾಯಾಧೀಶರ ಹೆಸರಿನಲ್ಲಿ ಲಂಚ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ(ಸಿಟ್)ದಿಂದ ತನಿಖೆಯನ್ನು ಕೋರಿ ಎನ್‌ಜಿಒ ಕ್ಯಾಂಪೇನ್ ಫಾರ್ ಜ್ಯುಡಿಷಿಯಲ್ ಅಕೌಂಟೇಬಿಲಿಟಿ ಆ್ಯಂಡ್ ರಿಫಾರ್ಮ್ಸ್(ಸಿಜೆಐಆರ್) ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯವು, ದೂರುದಾರ ಸಂಸ್ಥೆಗೆ 25 ಲ.ರೂ.ದಂಡವನ್ನು ವಿಧಿಸಿತು.
ನ್ಯಾಯವಾದಿ ಕಾಮಿನಿ ಜೈಸ್ವಾಲ್ ಅವರು ಇಂತಹುದೇ ಆರೋಪಗಳೊಂದಿಗೆ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ವಜಾಗೊಳಿಸಿತ್ತು.
ಒಡಿಷಾ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮಸ್ರೂರ್ ಖುದ್ದೂಸಿ ಅವರು ಓರ್ವ ಆರೋಪಿಯಾಗಿರುವ, ಮೆಡಿಕಲ್ ಕಾಲೇಜುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಲಂಚ ಕೇಳಿದ್ದ ಆರೋಪಗಳಿವೆ ಎಂದು ಅರ್ಜಿಯು ಪ್ರತಿಪಾದಿಸಿತ್ತು.
Next Story





