ಮೀಲಾದುನ್ನಬಿ: ಜೆಡಿಎಸ್‌ನಿಂದ ಹಣ್ಣುಹಂಪಲು ವಿತರಣೆ
ಪುತ್ತೂರು, ಡಿ. 1: ಮೀಲಾದುನ್ನಬಿ ಪ್ರಯುಕ್ತ ಕರ್ನಾಟಕ ಜೆಡಿಎಸ್ ವಾಟ್ಸಾಫ್ ಗ್ರೂಪ್ ಹಾಗೂ ಜೆಡಿಎಸ್ ಪುತ್ತೂರು ತಾಲ್ಲೂಕು ಘಟಕದ ವತಿಯಿಂದ ಪುತ್ತೂರಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಶುಕ್ರವಾರ ಹಣ್ಣುಹಂಪಲು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞ ವಿಟ್ಲ ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗುವಂತಾಗಬೇಕು. ಸಮಾಜದ ಪ್ರತಿಯೊಬ್ಬರು ಸನ್ನಡತೆ, ಸಹೃದಯತೆಯಿಂದ ಬಾಳುವಂತಾಗಬೇಕು ಎಂಬ ಆಶಯದಲ್ಲಿ ಪೈಗಂಬರ್ ಜನ್ಮದಿನದ ಪ್ರಯುಕ್ತ ಕರ್ನಾಟಕ ಜೆಡಿಎಸ್ ವಾಟ್ಸಾಫ್ ಗ್ರೂಫ್ ವತಿಯಿಂದ ಹಣ್ಣುಹಂಪಲು ವಿತರಣೆ ನಡೆದಿದೆ. ಇದು ಕರ್ನಾಟಕ ರಾಜ್ಯದಾದ್ಯಂತ ನಡೆಯುತ್ತಿದೆ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಐ.ಸಿ. ಕೈಲಾಸ್, ಕರ್ನಾಟಕ ಜೆಡಿಎಸ್ ಗ್ರೂಫ್ ಎಡ್ಮಿನ್ ಅಬ್ದುಲ್ಲಾ ಕೆದುವಡ್ಕ, ಜೆಡಿಎಸ್ ತಾಲ್ಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಕರೀಂ ಪಲ್ಲತ್ತೂರು, ರಾಜ್ಯ ಯುವ ಜೆಡಿಎಸ್ ಕಾರ್ಯದರ್ಶಿ ಜಾಫರ್ ಖಾನ್ ವಿಟ್ಲ, ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಸಾಲಿಯಾನ್, ನಗರ ಯುವ ಜೆಡಿಎಸ್ ಅಧ್ಯಕ್ಷ ಅದ್ದು ಪಡೀಲ್, ಜಿಲ್ಲಾ ಯುವ ಜೆಡಿಎಸ್ ಉಪಾಧ್ಯಕ್ಷ ಹರೀಶ್ ಕೊಟ್ಟಾರಿ ವಿಟ್ಲ, ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕಲಂದರ್ ಶರೀಫ್, ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ವಿಕ್ಟರ್ ಗೊನ್ಸಾಲ್ವಿಸ್ ಹಾಗೂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವೀಣಾ ಪಿ.ಎಸ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಸುಮಾರು 80 ಕೆಜಿ ಹಣ್ಣುಹಂಪಲು ವಿತರಿಸಲಾಯಿತು.







