ಶ್ರೀಗಂಧಮರ ಸಾಗಣಿಕೆಗೆ ಯತ್ನ: ಆರೋಪಿ ಪರಾರಿ
ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, 2 ಕೆ.ಜಿ ತೂಕದ ಶ್ರೀಗಂಧ ವಶ

ಸಿದ್ದಾಪುರ, ಡಿ.1: ತಾಲೂಕಿನ ಕೊಂಡ್ಲಿ ಅರಣ್ಯ ಸರ್ವೆ. ನಂ 308 ಅ ರಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿದು ಚಕ್ಕೆ ತಯಾರಿಸಿ ಸಾಗಣಿಕೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿ ಪರಾರಿಯಾಗಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಹಾಗೂ 12 ಕೆ.ಜಿ ತೂಕದ ಶ್ರೀಗಂಧವನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಆರೋಪಿಯ ಪತ್ತೆ ಕಾರ್ಯ ಪ್ರಗತಿಯಲ್ಲಿದ್ದು, ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜೀಜ್ ಶೇಖ್, ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಲೋಕೇಶ ಪಠಾಣಕರ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಸ್ವಾಮಿ, ಎಲ್.ಎಸ್. ಅರಣ್ಯ ರಕ್ಷಕರಾದ ವಿನಾಯಕ ಮಡಿವಾಳ, ಅರಣ್ಯ ವೀಕ್ಷಕರಾದ ಗಣಪತಿ ನಾಯ್ಕ, ಪರುಶುರಾಮ ಪಾಲ್ಗೊಂಡಿದ್ದರು.
Next Story





