ಬನ್ನೂರಿನಲ್ಲಿ ಮೀಲಾದ್ ಜಾಥಾ

ಪುತ್ತೂರು, ಡಿ. 1: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಬನ್ನೂರು ಬದ್ರಿಯಾ ಜುಮಾ ಮಸೀದಿ ಹಾಗೂ ಹನಫಿ ಜುಮಾ ಮಸೀದಿ ಬನ್ನೂರು ಇದರ ನೇತೃತ್ವದಲ್ಲಿ ಜಮಾಅತರ ಸಹಯೋಗದೊಂದಿಗೆ ಮೀಲಾದುನ್ನಬಿ ಕಾರ್ಯಕ್ರಮ ನಡೆಯಿತು.
ಬನ್ನೂರು ಹನಫಿ ಜುಮಾ ಮಸೀದಿಯಿಂದ ಹೊರಟ ಮೀಲಾದ್ ಮೆರವಣಿಗೆ ಬನ್ನೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಸಮಾಪ್ತಿಗೊಂಡಿತು. ಜಾಥಾದಲ್ಲಿ ದಪ್ಫು ಪ್ರದರ್ಶನ ಸಹಿತ ಇಸ್ಲಾಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಜಾಥಾವನ್ನು ಬನ್ನೂರು ಹನಫಿ ಜುಮಾ ಮಸೀದಿಯ ಖತೀಬರಾದ ವಜಹತ್ ಹುಸೈನ್ ಉದ್ಘಾಟಿಸಿದರು. ಬನ್ನೂರು ಬದ್ರಿಯಾ ಜುಮಾ ಮಸೀದಿ ಖತೀಬರು ಅಸ್ಅದ್ ಸಖಾಫಿ ಅಧ್ಯಕ್ಷತೆಯನ್ನುವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಬನ್ನೂರು ಜುಮಾ ಮಸೀದಿಯ ಅಧ್ಯಕ್ಷ ಹಾಜಿ. ಅಬೂಬಕರ್, ಸೆಕ್ರೆಟರಿ ಹಾಜಿ. ಅಬ್ದುಲ್ ತವ್ವಾಬ್ ಹಾಗೂ ಬನ್ನೂರು ಹನಫಿ ಜುಮಾ ಮಸೀದಿಯ ಅಧ್ಯಕ್ಷ ಅಝೀಝ್ ರೈಲ್ವೆ ಉಪಸ್ಥಿತರಿದ್ದರು.
Next Story





