ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಉಳಿಯಲ್ಲ: ಶಾಸಕ ಬಿ.ಬಿ.ಚಿಮ್ಮನಕಟ್ಟಿ
ಬಾಗಲಕೋಟ, ಡಿ.1: ಬಾದಾಮಿ ನನ್ನದು, ನನಗೆ ಟಿಕೆಟ್ ತಪ್ಪಿದರೆ ಕ್ಷೇತ್ರದಲ್ಲಿ ಪಕ್ಷ ಉಳಿಯುವುದಿಲ್ಲ. ಐದು ಸಲ ಶಾಸಕ, ಎರಡು ಸಲ ಮಂತ್ರಿ ಆಗಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಅಭಿವೃದ್ಧಿಯಲ್ಲಿ ನನ್ನ ಪಾತ್ರ ಜಾಸ್ತಿ ಇದೆ. ನನಗೆ ಟಿಕೆಟ್ ತಪ್ಪಿಸಿದರೆ ಪಾರ್ಟಿ ಉಳಿಯಬೇಕೆ ಬೇಡವೇ ಎಂಬ ಪ್ರಶ್ನೆ ಎದುರಾಗಲಿದೆ ಎಂದು ಧಮ್ಕಿ ಹಾಕಿದರು.
ಸಿದ್ದರಾಮಯ್ಯ ಬಾದಾಮಿಯಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಮೈಸೂರಿನಲ್ಲೇ ನಿಲ್ಲುವುದಾಗಿ ಹೇಳಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ನಾನೇ ನಿಲ್ಲುವೆ, ನಾನೇ ಗೆಲ್ಲುವೆ. ನನ್ನ ಬಿಟ್ಟು ಯಾರಿಗೆ ಟಿಕೆಟ್ ಕೊಡುತ್ತಾರೆ, ಪಕ್ಷಕ್ಕೆ ನಾನು ದುಡಿದಿದ್ದೇನೆ. ಬಾದಾಮಿ ಪುಗಸಟ್ಟೆ ಸಿಕ್ಕಿಲ್ಲ. ಬೇರೆ ತಾಲೂಕಿನವರು ಬಂದರೆ ಟಿಕೆಟ್ ಕೊಡುತ್ತಾರ, ಬಾದಾಮಿ ನನ್ನದು ಅಂಥ ಪಕ್ಷಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Next Story





