ಡಿಎಲ್‌ಇಡಿ ತರಬೇತಿ ಪಡೆಯುವಂತೆ ಸಲಹೆ
ಬೆಂಗಳೂರು, ಡಿ.1: ಮಕ್ಕಳ ಶಿಕ್ಷಣ ಕಾಯ್ದೆ ಅಡಿಯಲ್ಲಿ ತರಬೇತಿ ಪಡೆದ ಶಿಕ್ಷಕರು ಮಾತ್ರ ಶಾಲೆಗಳಲ್ಲಿ ಶಿಕ್ಷಕರಾಗಲು ಅರ್ಹತೆ ಪಡೆದಿರುತ್ತಾರೆ. ಹೀಗಾಗಿ, ತರಬೇತಿ ಪಡೆಯದ ಶಿಕ್ಷಕರು ಮುಂದಿನ 2019 ಮಾರ್ಚ್ ಅಂತ್ಯದೊಳಗೆ ಡಿಎಲ್‌ಇಡಿ ಶಿಕ್ಷಣ ಪಡೆಯಲು ಅವಕಾಶ ನೀಡಲಾಗಿದೆ.
ರಾಜ್ಯದಲ್ಲಿ ವಿವಿಧ ಶಾಲೆಗಳಲ್ಲಿ ಶಿಕ್ಷಕರ ತರಬೇತಿಯನ್ನು ಪಡೆಯದೆ ಸುಮಾರು 4603 ಜನರು ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬಂದಿರುತ್ತದೆ. ಹೀಗಾಗಿ, ತರಬೇತಿ ರಹಿತ ಶಿಕ್ಷಕರಿಗೆ ಡಿಎಲ್‌ಇಡಿ ತರಬೇತಿಯನ್ನು ದೂರಸಂಪರ್ಕ ಕಾರ್ಯಕ್ರಮದ ಮೂಲಕ ಎನ್‌ಐಒಎಸ್ ಸಂಸ್ಥೆಯ ವತಿಯಿಂದ ತರಬೇತಿ ನೀಡಲು ಪ್ರಕ್ರಿಯೆ ಆರಂಭಗೊಂಡಿದ್ದು, 3165 ಜನರು ನೋಂದಣಿಯು ಕ್ರಮ ಬದ್ದವಾಗಿದೆ. ಇವರಿಗೆ ರಾಜ್ಯದ 47 ಅಧ್ಯಯನ ಕೇಂದ್ರಗಳನ್ನು ಡಯಟ್ ಮತ್ತು ಬೆಂಗಳೂರು ನಗರದಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅನುದಾನಿತ ಬಿ.ಇಡಿ ಮತ್ತು ಡಿಎಲ್‌ಡಿ ಕಾಲೇಜುಗಳನ್ನು ಅಧ್ಯಯನ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ.
ಈ ಕೋರ್ಸ್‌ಗೆ ಸಂಬಂಧಿಸಿದಂತೆ ಅಧ್ಯಯನ ಸಾಮಗ್ರಿಗಳು ಎನ್‌ಐಒಎಸ್ ಮತ್ತು ಡಿಎಸ್‌ಇಆರ್‌ಟಿ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ರವಿವಾರ ಮತ್ತು ರಜಾದಿನಗಳಲ್ಲಿ ಅಧ್ಯಯನ ಕೇಂದ್ರಗಳಲ್ಲಿ ತರಗತಿಗಳು ಅರಂಭವಾಗುತ್ತದೆ. ಇದನ್ನು ರಾಜ್ಯ ಯೋಜನಾ ನಿರ್ದೇಶಕರು, ಎಸ್‌ಎಸ್‌ಎ, ಪ್ರಾದೇಶಿಕ ನಿರ್ದೇಶಕರು, ಎನ್‌ಐಒಎಸ್ ಮತ್ತು ಡಿಎಸ್‌ಇಆರ್‌ಟಿ ಗಳ ಮಾರ್ಗದರ್ಶನದಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಡಯಟ್‌ಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.





