ರಿಕ್ಷಾ ಪ್ರಿಪೇಯ್ಡಿ ಕೌಂಟರ್‌ಗೆ ಮನವಿ
ಬೆಂಗಳೂರು, ಡಿ.1: ಆಟೊ ಚಾಲಕರಿಗಾಗಿ ಮೆಟ್ರೊ ನಿಲ್ದಾಣಗಳಲ್ಲಿ ಪ್ರಿಪೇಯ್ಡಿ ಕೌಂಟರ್ ಸ್ಥಾಪಿಸುವಂತೆ ಸಂಚಾರ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಆರ್.ಹಿತೇಂದ್ರ, ಮೆಟ್ರೊದ ಎಲ್ಲ ನಿಲ್ದಾಣಗಳಲ್ಲೂ ಪ್ರಿಪೇಯ್ಡಿ ಕೌಂಟರ್ ಸ್ಥಾಪಿಸುವಂತೆ ಆಟೊ ಯೂನಿಯನ್‌ಗಳು ಮನವಿ ಸಲ್ಲಿಸಿವೆ. ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಇತ್ತೀಚೆಗಷ್ಟೆ ರಿಕ್ಷಾ ಪ್ರಿಪೇಯ್ಡಿ ಕೌಂಟರ್ ಸ್ಥಾಪಿಸಲಾಗಿದೆ. ಮೈಸೂರು ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಶೀಘ್ರ ಕೌಂಟರ್ ಸ್ಥಾಪಿಸಲಾಗುವುದು ಎಂದರು.
ಆದರ್ಶ ಆಟೊ ರಿಕ್ಷಾ ಡೈವರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಆದರ್ಶ ಮಾತನಾಡಿ, ಮೆಟ್ರೊ ನಿಲ್ದಾಣಗಳಲ್ಲದೆ, ಶಾಪಿಂಗ್ ಮಾಲ್ ಮತ್ತಿತರೆಡೆ ಪ್ರಿಪೇಯ್ಡಿ ಕೌಂಟರ್ ಸ್ಥಾಪಿಸಬಹುದಾದ 58ಸ್ಥಳ ಗುರುತಿಸಿ ಸಂಚಾರ ಪೊಲೀಸರಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ ಎಂದರು.
ಈ ಹಿಂದೆ ಆಟೊದಲ್ಲಿ ಸಂಚರಿಸುತ್ತಿದ್ದವರು ಇದೀಗ ಓಲಾ, ಉಬರ್‌ನ ಶೇರಿಂಗ್ ವ್ಯವಸ್ಥೆ ಮತ್ತು ನಮ್ಮ ಮೆಟ್ರೊದತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದಾಗಿ ನಮ್ಮ ದುಡಿಮೆಗೆ ಹೊಡೆತ ಬಿದ್ದೆದೆ. ಹೀಗಾಗಿ ಪ್ರಿಪೇಯ್ಡಿ ಕೌಂಟರ್ ಸ್ಥಾಪಿಸಲು ಕೋರಲಾಗಿದೆ ಎಂದು ಅವರು ತಿಳಿಸಿದರು.







