ಡಿ.4ರಿಂದ ಕ್ಷಯ ರೋಗ ನಿಯಂತ್ರಣ ಅಭಿಯಾನ
ಬೆಂಗಳೂರು, ಡಿ.1: ಕ್ಷಯಾ ರೋಗ ನಿಯಂತ್ರಣ ಕಾರ್ಯಕ್ರಮದಡಿ ಡಿ.4ರಿಂದ 18ರವರೆಗೆ ಮೂರನೆ ಹಂತದ ಅಭಿಯಾನವನ್ನು ರಾಜ್ಯದ 20ಜಿಲ್ಲೆಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ.
ಈಗಾಗಲೇ ರಾಜ್ಯದ 11ಜಿಲ್ಲೆಗಳಲ್ಲಿ ಜು.17ರಿಂದ 31ರವರೆಗೆ ಎರಡನೆ ಹಂತದ ಅಭಿಯಾನ ಮುಗಿದಿದ್ದು, ಇದರಲ್ಲಿ ಸುಮಾರು 1600 ಹೊಸ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಮೂರನೆ ಹಂತದ ಅಭಿಯಾನದಲ್ಲಿ 65ಲಕ್ಷ ಅಪಾಯದ ಅಂಚಿನಲ್ಲಿರುವ ಕ್ಷಯ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





