ಡಿ.6ಕ್ಕೆ 'ಸ್ವಾಭಿಮಾನಿ ಸಂಕಲ್ಪ ದಿನಾಚರಣೆ'
ಬೆಂಗಳೂರು, ಡಿ. 1: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಅಂಗವಾಗಿ ಡಿ.6ರ ಸಂಜೆ 5:30ಕ್ಕೆ ಸಚಿವಾಲಯ ಕ್ಲಬ್‌ನ ಚನ್ನಬಸಪ್ಪ ಸಭಾಂಗಣದಲ್ಲಿ ಸ್ವಾಭಿಮಾನಿ ಸಂಕಲ್ಪ ದಿನಾಚರಣೆಯನ್ನು ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕವಿ ಕೆ.ಬಿ.ಸಿದ್ದಯ್ಯ ನೆರವೇರಿಸಲಿದ್ದು, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಡಾ.ಎನ್.ಮಂಜುಳಾ, ಬೆಂಗಳೂರು ವಿವಿ ಕುಲ ಸಚಿವ ಪ್ರೊ.ಬಿ.ಕೆ.ರವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬಿಬಿಎಂಪಿ ಪೂರ್ವ ವಿಭಾಗದ ಉಪ ಆಯುಕ್ತೆ ಲಕ್ಷ್ಮಿದೇವಿ, ವಿಧಾನಸಭೆ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ.ಕಾಳೆ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಇದೇ ವೇಳೆ ಪೊಲೀಸ್ ಅಧಿಕಾರಿ ಎಚ್.ಡಿ.ಆನಂದ ಕುಮಾರ್, ಕೆಪಿಎಸ್ಸಿ ಸದಸ್ಯ ಡಾ.ರವಿಕುಮಾರ್, ಕ್ರೀಡಾಪಟು ಬಸವರಾಜು ಅವರನ್ನು ಸನ್ಮಾನಿಸಲಾಗುವುದು.
ಅಧ್ಯಕ್ಷತೆಯನ್ನು ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ವಹಿಸಲಿದ್ದು, ಗೌರವಾಧ್ಯಕ್ಷ ಆರ್.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯ ಕುಮಾರ್, ಕೋಶಾಧ್ಯಕ್ಷ ಸತ್ಯನಾರಾಯಣ, ಹಿರಿಯ ಉಪಾಧ್ಯಕ್ಷ ಆರ್.ಮೋಹನ್ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.







