ಬೆಳ್ತಂಗಡಿ: ಬಾವಿಗೆ ಬಿದ್ದು ಬಾಲಕ ಮೃತ್ಯು
ಬೆಳ್ತಂಗಡಿ, ಡಿ. 1: ವೇಣೂರು ಠಾಣೆ ವ್ಯಾಪ್ತಿಯ ನೀರಪಲ್ಕೆ ಎಂಬಲ್ಲಿ ಬಾವಿಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.
ವೇಣೂರು ಗ್ರಾಮದ ನೀರಪಲ್ಕೆ ನಿವಾಸಿ ಶ್ಯಾಮ ದೇವಾಡಿಗ ಎಂಬವರ ಪುತ್ರ, ವೇಣೂರು ವಿದ್ಯೋದಯ ಶಾಲೆಯ ವಿದ್ಯಾರ್ಥಿ ಶ್ರೀಕಾಂತ್ (11) ಮೃತ ಬಾಲಕ ಎಂದು ಗುರುತಿಸಲಾಗಿದೆ. ತಂದೆ-ತಾಯಿ ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ಸಂಭವಿಸಿದೆ.
ಮನೆಯಲ್ಲಿ ಈತ ಹಾಗೂ ತಂಗಿ ಮಾತ್ರ ಇದ್ದರು. ಶ್ರೀಕಾಂತ್ ಬಾವಿಗೆ ಬಿದ್ದುದ್ದನ್ನು ನೋಡಿದ ಈತನ ತಂಗಿ ಪಕ್ಕದ ಮನೆಯವರಿಗೆ ತಿಳಿಸಿದ್ದು, ಪಕ್ಕದ ಮನೆ ಯವರು ಇತರರಿಗೆ ತಿಳಿಸಿ, ಮೃತದೇಹವನ್ನು ಬಾವಿಯಿಂದ ತೆಗೆಯಲಾಯಿತು ಎಂದು ತಿಳಿಸಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





