ಲಾರಿ ಢಿಕ್ಕಿ: ಸ್ವಾಮೀಜಿ ಸೇರಿ ಇಬ್ಬರು ಮೃತ್ಯು
ದಾವಣಗೆರೆ, ಡಿ.1: ಲಾರಿ ಚಾಲಕನ ಅಜಾಗರೂಕತೆಯಿಂದ ಸ್ವಾಮೀಜಿ ಹಾಗೂ ಹೂವಿನ ವ್ಯಾಪಾರಿ ಮೃತಪಟ್ಟ ಘಟನೆ ತಾಲೂಕಿನ ಕಲ್ಪನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.
ಹೂವಿನ ವ್ಯಾಪಾರಿ ಗಂಗಾಧರ್ (50) ಹಾಗೂ ಹಿರಿಯ ಸ್ವಾಮೀಜಿ ಸುರಮ್ ನಾಥ್ (55) ಮೃತಪಟ್ಟವರೆಂದು ಗುರುತಿಸಲಾಗಿದೆ.
ಗುಜರಾತ್ ಮೂಲದ ಐವರು ಸ್ವಾಮೀಜಿಗಳ ತಂಡ ಮೈಸೂರಿನ ಚಾಮುಂಡಿಬೆಟ್ಟ ವೀಕ್ಷಿಸಲು ಪಾದಯಾತ್ರೆ ಮೂಲಕ ಕಲ್ಪನ ಹಳ್ಳಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ, ನಿಟುವಳ್ಳಿಯ ಹೂವಿನ ವ್ಯಾಪಾರಿ ಗಂಗಾಧರ್ ಎಂಬವರು ಸಾಗುತ್ತಿದ್ದ ಈ ಸ್ವಾಮೀಜಿಗಳಿಗೆ ಹೂಗಳನ್ನು ನೀಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಇಬ್ಬರ ಮೇಲೆ ಹರಿದಿದೆ. ಹಿರಿಯ ಸ್ವಾಮೀಜಿ ಸುರಮ್ ನಾಥ್ ಹಾಗೂ ಹೂವಿನ ವ್ಯಾಪಾರಿ ಇಬ್ಬರು ಸ್ಥಳದಲ್ಲಿಯೇ ಮರತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಲಾರಿ ಚಾಲಕ ನಾಸೀರ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





