ಬಸ್‍ಗೆ ಕಾರು ಢಿಕ್ಕಿ: ಐವರಿಗೆ ಗಾಯ
41 ಪ್ರಯಾಣಿಕರ ಪಾರು ಮಾಡಿದ ಬಸ್ ಚಾಲಕನ ಸಮಯಪ್ರಜ್ಞೆ

ನಾಗಮಂಗಲ, ಡಿ.1: ಸಾರಿಗೆ ಬಸ್‍ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐದು ಮಂದಿ ಗಾಯಗೊಂಡಿದ್ದು, ಬಸ್ ಚಾಲಕನ ಸಮಯಪ್ರಜ್ಞೆಯಿಂದ ಬಸ್‍ನಲ್ಲಿದ್ದ 41 ಪ್ರಯಾಣಿಕರು ಪ್ರಾಣಾಪಾಯವಿಲ್ಲದೆ ಪಾರಾದ ಘಟನೆ ತಾಲೂಕಿನ ಜಲಸೂರು-ಬೆಂಗಳೂರು ಹೆದ್ದಾರಿಯ ಕಾಂತಾಪುರ-ಗಂಗಸಮುದ್ರ ಗ್ರಾಮಗಳ ತಿರುವಿನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕೆ.ಆರ್.ಪೇಟೆ ತಾಲೂಕಿನ ಕಾಮನಹಳ್ಳಿ ಗ್ರಾಮದ ಸುನೀಲ್(25), ಮದನ್(23), ಪ್ರಭಾಕರ (38), ಸಚ್ಚಿನ್(20) ಹಾಗೂ ಮುತ್ತುರಾಜ್(20) ಗಾಯಾಳುಗಳೆಂದು ಗುರುತಿಸಲಾಗಿದ್ದು, ಅಪಘಾತದ ತೀವ್ರತೆಗೆ ಕಾರಿನ ಎದುರು ನಜ್ಜುಗುಜ್ಜಾಗಿದೆ.
ಸುನೀಲ್ ಮತ್ತು ಆತನ ಗೆಳೆಯರು ತಾಲೂಕಿನ ಹದ್ದಿಕಲ್ಲು ಹನುಮಂತರಾಯಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಜಿಟಿಜಿಟಿ ಮಳೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಸಾರಿಗೆ ಬಸ್‍ಗೆ ಢಿಕ್ಕಿ ಹೊಡೆದಿದ್ದು, ರಸ್ತೆ ಪಕ್ಕಕ್ಕೆ ಚಲಿಸಿದ ಬಸ್ ಸ್ವಲ್ಪದರಲ್ಲೇ ಮರಕ್ಕೆ ಢಿಕ್ಕಿಯಾಗುವುದನ್ನು ಚಾಲಕ ತಪ್ಪಿಸಿದ್ದಾರೆ.
ಈ ಬಗ್ಗೆ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





