ಮಾಜಿ ಶಾಸಕ ಗೌಡಗೆರೆ ನಾಗಪ್ಪ ವಿಧಿವಶ

ಮಂಡ್ಯ, ಡಿ.1:ಹಿರಿಯ ತಲೆಮಾರಿನ ರಾಜಕಾರಣಿ ಹಾಗೂ ಮಾಜಿ ಶಾಸಕ ಗೌಡಗೆರೆ ನಾಗಪ್ಪ (80) ಶುಕ್ರವಾರ ನಿಧನರಾಗಿದ್ದಾರೆ.
ನಿತ್ಯ ಸಚಿವ ಕೆ.ವಿ.ಶಂಕರಗೌಡರ ಒಡನಾಡಿಯಾದ ತಾಲೂಕಿನ ಗೌಡಗೆರೆ ಗ್ರಾಮದ ನಾಗಪ್ಪ ಅವರು, 1967ರಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ, ವೀರೇಂದ್ರಪಾಟೀಲ್ ಅವರ ನಿಕಟವರ್ತಿಯಾಗಿದ್ದರು.
ಮೃತರು ಇಬ್ಬರು ಪುತ್ರಿಯರು, ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಮರೀಗೌಡ ಅವರ ಬಡಾವಣೆಯ ನಿವಾಸದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಡಿ.2ರಂದು ಮಧ್ಯಾಹ್ನ 1ಕ್ಕೆ ಕಲ್ಲಹಳ್ಳಿಯ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Next Story





