ಕಲ್ಲುಕೋರೆಗೆ ಬಿದ್ದು ವ್ಯಕ್ತಿ ಮೃತ್ಯು
ಕೋಟ, ಡಿ.1: ವಿಪರೀತ ಮದ್ಯಸೇವಿಸುವ ಹವ್ಯಾಸ ಹೊಂದಿದ್ದ ವ್ಯಕ್ತಿಯೊಬ್ಬರು ಗುರುವಾರ ಸಂಜೆಯ ವೇಳೆಗೆ ಮನೆಯ ಸಮೀಪ ಇರುವ ಸರಕಾರಿ ಕಲ್ಲುಕೋರೆಯ ಹೊಂಡದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೇಳೂರು ಗ್ರಾಮದ ಬಡಾಬೆಟ್ಟುವಿನಲ್ಲಿ ನಡೆದಿದೆ.
ಮೃತರನ್ನು ಸಂತೋಷ ಶೆಟ್ಟಿ (48) ಎಂದು ಗುರುತಿಸಲಾಗಿದೆ. ಕೆಲಸಕ್ಕೆ ಹೋಗದೇ ವಿಪರೀತ ಮಧ್ಯ ಸೇವಿಸುವ ಚಟ ಹೊಂದಿದ್ದು, ಬುಧವಾರ ಸಂಜೆ ಆರು ಗಂಟೆಗೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ನಿನ್ನೆ ಅವರಿಗಾಗಿ ಹುಡುಕಿದಾಗ ಸಂಜೆ ಮನೆಯ ಸಮೀಪದ ಸರಕಾರಿ ಕಲ್ಲುಕೋರೆಯ ಹೊಂಡದ ನೀರಿನಲ್ಲಿ ಅವರ ಮೃತದೇಹ ಕಂಡುಬಂತು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





