'ಮೀಲಾದುನ್ನಬಿ' ಸೌಹಾರ್ದತೆಗೆ ಸ್ಫೂರ್ತಿ ನೀಡಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಡಿ.1: ಮೀಲಾದುನ್ನಬಿ ಹಬ್ಬವು ನಂಬಿಕೆ ಮತ್ತು ವಿಶ್ವಾಸದ ನೆಲಗಟ್ಟಿನಲ್ಲಿ ಸೋದರತೆ ಹಾಗೂ ಸೌಹಾರ್ದತೆಯ ತಳಹದಿಯಲ್ಲಿ ಬಾಳಿ- ಬದುಕಲು ಸರ್ವರಿಗೂ ಅವಕಾಶ ಕಲ್ಪಿಸಲು ಸ್ಫೂರ್ತಿ ಹಾಗೂ ಪ್ರೇರಣೆ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಶುಭ ಹಾರೈಸಿದ್ದಾರೆ.
ಪ್ರವಾದಿ ಮುಹಮ್ಮದ್ ಅವರ ಜನ್ಮದಿನವಾದ ಮೀಲಾದುನ್ನಬಿ ಹಬ್ಬವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ಬಳಿಕ, ಧರ್ಮ ಗ್ರಂಥದ ವಾಚನ. ತದನಂತರ, ಕುಟುಂಬ ಸದಸ್ಯರು ಹಾಗೂ ಗೆಳೆಯರೊಂದಿಗೆ ಔತಣ, ಬಂಧು-ಮಿತ್ರರೊಡನೆ ಸಡಗರ, ಸಂತಸ ಹಾಗೂ ಸಂಭ್ರಮವನ್ನು ಹಂಚಿಕೊಳ್ಳುವ ಸುಂದರ್ಭ ಎಂದು ಅವರು ಬಣ್ಣಿಸಿದ್ದಾರೆ.
Next Story





