ಬಿಸ್ಲೇರಿ ನೀರಿನ ಬಾಟಲ್‌ಗಳ ಮೇಲಿನ ಲೇಬಲ್‌ನಲ್ಲಿ ಕನ್ನಡ ಸ್ಥಳೀಯ ಭಾಷೆಗಳಿಗೆ ಮೊದಲ ಆದ್ಯತೆ: ಅಂಜನಾ ಘೋಷ್
ಬೆಂಗಳೂರು, ಡಿ.1: ಬಿಸ್ಲೇರಿ ನೀರಿನ ಬಾಟಲ್‌ಗಳ ಮೇಲಿನ ಲೇಬಲ್‌ನಲ್ಲಿ ದೇಶದಲ್ಲಿರುವ ಆಯಾ ರಾಜ್ಯದ ಸ್ಥಳೀಯ ಭಾಷೆಗಳಲ್ಲಿ ಹೆಚ್ಚಿನ ಮಾಹಿತಿ ಕೊಡಲು ನಿರ್ಧರಿಸಲಾಗಿದೆ ಎಂದು ಬಿಸ್ಲೇರಿ ಕಂಪೆನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಅಂಜನಾ ಘೋಷ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸ್ತುತ ಕರ್ನಾಟಕದಲ್ಲಿ ಕನ್ನಡ ಭಾಷೆಯ ಲೇಬಲ್‌ಗಳನ್ನು ಒಳಗೊಂಡಿರುವ ಬಿಸ್ಲೇರಿ ಬಾಟಲ್‌ಗಳು ಮಾರುಕಟ್ಟೆ ಪ್ರವೇಸಿಸಿದೆ. ಅದೇ ಮಾದರಿಯಲ್ಲಿ ದೆಹಲಿ, ರಾಜಸ್ಥಾನ, ಉತ್ತರಾಂಚಲ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಛತ್ತೀಸ್‌ಗಢ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಗಳಲ್ಲಿಯೇ ಮಾಹಿತಿಯನ್ನೊಳಗೊಂಡ ಬಿಸ್ಲೇರಿ ಬಾಟಲ್‌ಗಳು ಮಾರುಕಟ್ಟೆಗೆ ಬರಲಿವೆ ಎಂದು ಮಾಹಿತಿ ನೀಡಿದ್ದಾರೆ.
ಭಾರತ ಬಹು ಭಾಷೆಗಳ ತವರಾಗಿದ್ದು, ದೇಶದಾದ್ಯಂತ ಜನತೆ ತಮ್ಮದೇ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸುವುದಕ್ಕೆ ಆದ್ಯತೆ ನೀಡುತ್ತಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಭಾಷೆಯಲ್ಲಿನ ಲೇಬಲ್‌ಗಳು ಅಲ್ಲಿನ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳಲು ನೆರವಾಗುತ್ತವೆ. ಹೀಗಾಗಿ ಸ್ಥಳೀಯ ಭಾಷೆಯಲ್ಲಿಯೇ ಬಿಸ್ಲೇರಿ ಬಾಟಲ್‌ಗಳ ಲೇಬಲ್ ಒಳಗೊಂಡಿರುತ್ತವೆ ಎಂದು ಅವರು ತಿಳಿಸಿದ್ದಾರೆ.





