ಮೀಲಾದುನ್ನಬಿ ಪ್ರಯುಕ್ತ ವಿದ್ಯಾ ವೆಲ್‌ಫೆರ್ ಅಸೋಸಿಯೇಶನ್ ವತಿಯಿಂದ ಹಣ್ಣು ಹಂಪಲು ವಿತರಣೆ
ಬೆಳ್ತಂಗಡಿ, ಡಿ. 1: ಬೆಳ್ತಂಗಡಿ ವಿದ್ಯಾ ವೆಲ್‌ಫೆರ್ ಅಸೋಸಿಯೇಶನ್ ವತಿಯಿಂದ ಪ್ರವಾದಿ ಪೈಗಂಬರ್ ಜನ್ಮದಿನದ ಅಂಗವಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಮೀಲಾದುನ್ನಬಿ ಆಚರಿಸಲಾಯಿತು.
ಯುತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್‌ಕುಮಾರ್ ಹಣ್ಣು ಹಂಪಲು ವಿತರಿಸುವ ಮೂಲಕ ಸಂಘಕ್ಕೆ ಶುಭ ಹಾರೈಸಿದರು. ಬಳಿಕ ಮಾತನಾಡಿದ ವಿದ್ಯಾ ವೆಲ್‌ಫೆರ್ ಅಸೋಸಿಯೇಶನ್ ಅಧ್ಯಕ್ಷ ಶಾಹಿದ್ ಪಾದೆ ಬೆಳಾಲ್ ಸಂಘದ ವತಿಯಿಂದ ಕಳೆದ ಏಳು ವರ್ಷಗಳಿಂದ ಪೈಗಂಬರ್ ಜನ್ಮ ದಿನಾಚರಣೆಯನ್ನು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನು ಸಂದರ್ಶಿಸಿ ಹಣ್ಣ ಹಂಪಲು ವಿತರಿಸುವ ಮೂಲಕ ಶಾಂತಿಯ ಸಂದೇಶ ಸಾರುತ್ತಿದ್ದೇವೆ ಎಂದರು.
ಈ ದೇಶದಲ್ಲಿ ಇಂದಿಗೂ ಸೌಹಾರ್ದತೆ ನೆಲೆಯೂರಿದೆ. ಅದುವೆ ಈ ದೇಶದ ದೊಡ್ಡ ಆಯುಧ ಎಂದರಲ್ಲದೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಧರ್ಮವನ್ನು ಪ್ರೀತಿಸಿ ಇನ್ನೊಂದು ಧರ್ಮವನ್ನು ಗೌರವಿಸಿದಾಗ ಈ ದೇಶವು ಸುಭದ್ರವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ನಿರ್ದೇಶಕರಾದ ಅಬ್ದುಲ್ ಗಫೂರ್ ಪುದುವೆಟ್ಟು, ಜಿಲ್ಲಾ ಜೆ.ಡಿ.ಎಸ್ ಅಲ್ಪ ಸಂಖ್ಯಾತರ ಘಟಕದ ಸದಸ್ಯ ಅಬ್ದುಲ್ ರಹಿಮಾನ್ ಅಂಗರಕಂಡ, ಹಂಝ ಬೊಳ್ಮಿನಾರು, ದಯಾನಂದ ಗೇರುಕಟ್ಟೆ, ನೌಷಾದ್ ನಲ್ಕೆತ್ಯಾರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆದಂ ಟಿ.ಎಚ್ ಬೆಳಾಲು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.







