ವಿಕಲಚೇತನರ ಪ್ರಶಸ್ತಿ ಪ್ರಕಟ: ಸಚಿವೆ ಉಮಾಶ್ರೀ
ಬೆಂಗಳೂರು, ಡಿ. 1: ವಿಶ್ವ ವಿಕಲಚೇತನರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 15 ಮಂದಿ ವಿಕಲಚೇತನರಿಗೆ, 10 ಸಂಸ್ಥೆಗಳಿಗೆ ಹಾಗೂ 5 ಮಂದಿ ಶಿಕ್ಷಕರನ್ನು ವಿಕಲಚೇತನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ವೈಯಕ್ತಿಕ ವಿಭಾಗ: ಕೆ.ಆರ್.ವೆಂಕಟೇಶ್-ಬೆಂಗಳೂರು, ಎಂ.ಮಂಜುನಾಥ್, ವಿಜಯ ಕುಮಾರಿ ಮುರಾರಪ್ಪ, ಸಿ.ವಿ.ರಾಜಣ್ಣ-ಕೋಲಾರ, ಗಣೇಶ್ ಈಶ್ವರ ಭಟ್ಟ-ಮೈಸೂರು, ಆರ್.ಮಂಜುನಾಥ, ಲಿಯಾಕತ್ ಅಲಿ, ವರದರಾಜ್, ಚಂದ್ರಾಮ ಎಸ್., ಹನಮಂತ, ಮಲ್ಲಿಕಾರ್ಜುನ ಬಸಪ್ಪಉಮರಾಣಿ, ಜಬ್ಬಾರ ಅಲಿ ಬಿ.ಮನಿಯಾರ, ಕುಪ್ಪಣ್ಣ, ಜಯಶ್ರೀ, ತಿಮ್ಮಣ್ಣ ಇವರನ್ನು ಆಯ್ಕೆ ಮಾಡಲಾಗಿದೆ.
ಸಂಸ್ಥೆಗಳು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ, (ನಿಮ್ಹಾನ್ಸ್) ಮನೋವೈದ್ಯಕೀಯ ಪುನರ್ವಸತಿ ಸೇವೆಗಳ ವಿಭಾಗ ಬೆಂಗಳೂರು, ಮೊಬಿಲಿಟಿ ಇಂಡಿಯಾ, ಜೆ.ಪಿ.ನಗರ, 2ನೆ ಫೇಸ್, ಬೆಂಗಳೂರು, ದೀಪಾ ಅಂಧ ಮಕ್ಕಳ ಉಚಿತ ವಸತಿಯುತ ಹೆಣ್ಣು ಮಕ್ಕಳ ಪ್ರೌಢಶಾಲೆ, ಸುಬ್ರಮಣ್ಯನಗರ, ಬೆಂಗಳೂರು, ನವೋದಯ ಎಜುಕೇಶನಲ್ ಟ್ರಸ್ಟ್ (ರಿ), ಮಾನಸಿಕ ಅಸ್ವಸ್ಥ ಸೆರೆಬ್ರಲ್ ಪಾಲ್ಸಿ ಆಟಿಸಂ ಹಾಗೂ ತೀವ್ರತರವಾದ ಬುದ್ಧಿಮಾಂದ್ಯ ಮಕ್ಕಳ ಹಗಲು ಪಾಲನಾ ಕೇಂದ್ರ, ನಾಗರಭಾವಿ ಬೆಂಗಳೂರು, ನ್ಯಾಷನಲ್ ಅಸೋಸಿಯೇಶನ್ ಫಾರ್ ದಿ ಬ್ಲೈಂಡ್, ಅಂಧರ ಹಾಗೂ ಕಿವುಡರ ಕೈಗಾರಿಕಾ ತರಬೇತಿ ಕೇಂದ್ರ, ಯಾದವಗಿರಿ ಕೈಗಾರಿಕಾ ಪ್ರದೇಶ, ಮೈಸೂರು, ಸಂತ ಜೋಸೆಫರ ಅಮೃತವಾಣಿ ಶ್ರವಣದೋಷವುಳ್ಳ ಮಕ್ಕಳ ವಸತಿಯುತ ಶಾಲೆ, ವಿರಾಜಪೇಟೆ, ಕೊಡಗು ಜಿಲ್ಲೆ, ರೋಟರಿ ಟ್ರಸ್ಟ್ (ರಿ), ಎನ್.ಕೆ. ಗಣಪಯ್ಯ, ರೋಟರಿ ಶ್ರವಣದೋಷವುಳ್ಳ ಮಕ್ಕಳ ಶಾಲೆ, ಸಕಲೇಶಪುರ, ಹಾಸನ ಜಿಲ್ಲೆ, ಅಜಿತ ಮನೋಚೇತನಾ ಟ್ರಸ್ಟ್ (ರಿ), ವಿಕಾಸ ಬೌದ್ಧಿಕ ಸವಾಲಿನ ಮಕ್ಕಳ ದೈನಂದಿನ ವಿಶೇಷ ಶಾಲೆ, ಶಿರಸಿ, ಉತ್ತರಕನ್ನಡ ಜಿಲ್ಲೆ, ಸ್ವಯಂ ಉದ್ಯೋಗ ತರಬೇತಿ ಘಟಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹುಡ್ಕೋಕಾಲನಿ, ಸಿದ್ಧಲಿಂಗ ನಗರ, ಗದಗ ಜಿಲ್ಲೆ. ಹರಿ ಓಂ ಜ್ಞಾನದೀಪ ರೂರಲ್ ಎಜುಕೇಷನ್ ಸೊಸೈಟಿ (ರಿ), ಹಾಲಹಿಪ್ಪರ್ಗಾ, ಭಾಲ್ಕಿ, ಬೀದರ್ ಜಿಲ್ಲೆ.
ವಿಶೇಷ ಶಿಕ್ಷಕರಿಗೆ: ಕೆ.ಎನ್.ಶೋಭಾ, ಶಿವರಾಮಯ್ಯ, ಶ್ರೀಕಾಂತ್ ಚಿಮಲ್, ಭಾಗ್ಯಶ್ರೀ ಗುಲ್, ಕೇದಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಡಿ.3ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ವಿತರಿಸಲಾಗುವುದೆಂದು ಉಮಾಶ್ರೀ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







