ಬೆಂಗಳೂರು: ಮೀಲಾದುನ್ನಬಿ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರು, ಡಿ.1: ಪ್ರವಾದಿ(ಸ.ಅ)ರವರ ಜನ್ಮ ದಿನವಾದ ಮೀಲಾದುನ್ನಬಿ ಶನಿವಾರ ನಗರದಲ್ಲಿ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲ ರಸ್ತೆಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಮೀಲಾದುನ್ನಬಿ ಅಂಗವಾಗಿ ನಗರದ ನೃಪತುಂಗ ರಸ್ತೆಯ ವೈಎಂಸಿಎ ಮೈದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಅಲಂಕೃತ ವಾಹನ, ಮೆರವಣಿಗೆ ಮೂಲಕ ಬರಲಿದ್ದಾರೆ. ಹೀಗಾಗಿ, ಜೆ.ಸಿ.ರಸ್ತೆ, ಆರ್‌ಆರ್‌ಎಂಆರ್ ರಸ್ತೆ, ಕಸ್ತೂರಿಬಾ ರಸ್ತೆ, ದೇವಾಂಗ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಕೆಜಿ ರಸ್ತೆಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
* ಕೆ.ಆರ್.ವೃತ್ತದಿಂದ ಕಬ್ಬನ್ ಪಾರ್ಕ್ ಮಾರ್ಗದಿಂದ ಸೆಂಟ್ರಲ್ ಲೈಬ್ರರಿ ವೃತ್ತದ ಬಳಿ ಬಲ ತಿರುವು ಪಡೆದು ಏಕಮುಖ ಸಂಚಾರದ ವಿರುದ್ಧವಾಗಿ ಹಡ್ಸನ್ ವೃತ್ತಕ್ಕೆ ಹೋಗಬಹುದು.
* ಸಿಟಿ ಮಾರ್ಕೆಟ್ ಕಡೆಯಿಂದ ಬರುವ ಎಲ್ಲ ಮಾದರಿಯ ವಾಹನಗಳು ಟೌನ್ ಹಾಲ್ ವೃತ್ತ-ಎನ್.ಆರ್.ವೃತ್ತ ಮಾರ್ಗವಾಗಿ ಕೆ.ಜಿ.ರಸ್ತೆಯಲ್ಲಿ ಚಲಿಸಿ ಕೆಂಪೇಗೌಡ ಬಸ್ ನಿಲ್ದಾಣ ತಲುಪಬಹುದು.
* ರಿಚ್‌ಮಂಡ್ ರಸ್ತೆ-ರೆಸಿಡೆನ್ಸಿ ರಸ್ತೆ ಕಡೆಗೆ ಹೋಗುವವರು ಪಿಕೆ ಲೇನ್ ಮತ್ತು ಓಟಿಸಿ ರಸ್ತೆಯಲ್ಲಿ ಚಲಿಸಿ ಎನ್‌ಆರ್ ವೃತ್ತದ ಮೂಲಕ ದೇವಾಂಗ ವೃತ್ತ, ಮಿಷನ್ ರಸ್ತೆ ಮಾರ್ಗವಾಗಿ ಹೋಗಬಹುದಾಗಿದೆ.
* ಬೈಕ್‌ಗಳನ್ನು ನೃಪತುಂಗ ರಸ್ತೆಯಲ್ಲಿರುವ ಪಿಡಬ್ಲೂ.ಡಿ./ಶಿಕ್ಷಣ ಇಲಾಖಾ ಕಚೇೀರಿ ಆವರಣದಲ್ಲಿ ನಿಲ್ಲಿಸಬಹುದಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.







