ಕರಾವಳಿ ಕರ್ನಾಟಕಕ್ಕೆ ಚಂಡಮಾರುತ: ಎಚ್ಚರಿಕೆ

ಉಡುಪಿ, ಡಿ.1: ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಚಂಡಮಾರುತದ ಪರಿಣಾಮವಾಗಿ ಮುಂದಿನ 48 ಗಂಟೆಗಳ ಕಾಲ ಕರ್ನಾಟಕ ಕರಾವಳಿಯುದ್ದಕ್ಕೂ ಗಂಟೆಗೆ 45-55ರಿಂದ 65 ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಇದರಿಂದ 10ರಿಂದ 13 ಅಡಿ ಎತ್ತರದ ಅಲೆಗಳು ಸಮುದ್ರ ದಡವನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಇನ್‌ಕೋಸಿಸ್ ಎಚ್ಚರಿಕೆ ನೀಡಿದೆ.
ಇಂದು(ಶುಕ್ರವಾರ) ರಾತ್ರಿ 8:30ರಿಂದ ಡಿ.3ರ ರಾತ್ರಿ 11:30ರ ನಡುವಿನ ಅವಧಿಯಲ್ಲಿ ಕರ್ನಾಟಕದ ಮಂಗಳೂರಿನಿಂದ ಕಾರವಾರದವರೆಗಿನ ಸಮುದ್ರ ತೀರದಲ್ಲಿ 3 ರಿಂದ 3.9 ಮೀ. ಎತ್ತರದ ಅಲೆಗಳು ಅಪ್ಪಳಿಸಲಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಕರ್ನಾಟಕ ಕಂದಾಯ ವಿಕೋಪ ನಿರ್ವಹಣಾ ಇಲಾಖೆಯ ಉಪ ಕಾರ್ಯದರ್ಶಿ ಕೆ. ಉಮಾಪತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





