ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತಿ ಶ್ರೇಷ್ಟ : ನ್ಯಾಯಮೂರ್ತಿ ಕಬ್ಬೂರ
ಮುಂಡಗೋಡ, ಡಿ.1: ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತಿ ಶ್ರೇಷ್ಟವಾದದ್ದು. ಒಬ್ಬ ಪ್ರಜೆ ಯಾವ ರೀತಿ ಸಮಾಜದಲ್ಲಿ ಬದುಕಬೇಕು ಮತ್ತು ಆ ಪ್ರಜೆಯ ಹಕ್ಕಗಳು ಕರ್ತವ್ಯಗಳ ಕುರಿತು ಸವಿಸ್ತಾರವಾಗಿ ನಮ್ಮ ಸಂವಿಧಾನದಲ್ಲಿ ವಿವರಸಿದೆ ಎಂದು ಇಲ್ಲಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಈರನಗೌಡ ಕಬ್ಬೂರ ಹೇಳಿದರು.
ಅವರು ತಾಲೂಕು ಕಾನೂನು ಸೇವಾ ಸಮೀತಿ ಮುಂಡಗೋಡ, ನ್ಯಾಯವಾದಿಗಳ ಸಂ, ಕಂದಾಯ ಇಲಾಖೆ, ಪೊಲೀಸ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಮತ್ತು ಶಿಕ್ಷಣ ಇಲಾಖೆ, ಹಾಗೂ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ದಿನ ಅಂಗವಾಗಿ ಕಾನೂನುಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತದ ಪ್ರತಿಯೊಬ್ಬ ನಾಗರಿಕನು ಭಾರತದ ಸಂವಿಧಾನವನ್ನು ಅಧ್ಯಯನ ಮಾಡಬೇಕು. ಚಿಕ್ಕನಿಂದಲೆ ಸಮಾಜದ ಕುರಿತು ಸಮಾಜದಲ್ಲಿ ನಡೆಯುಂತಹ ಅನ್ಯಾಯದ ವಿರುದ್ದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳು ನಾಳಿನ ಪ್ರಜೆಗಳು ನಿವು ಕಾನೂನನ್ನು ತಿಳಿಯುವುದರಿಂದ ಮುಂದೆ ಸಂಭವಿಸುವ ಅವಗಡಗಳಿಂದ ದೂರ ಉಳಿಯಬಹುದು ಮತ್ತು ಗೊತ್ತಿಲ್ಲದಿರುವವರಿಗೆ ಮಾಹಿತಿ ನೀಡಬಹುದು ಸಂವಿಧಾನ ನಮಗೆ ನೀಡಿದ ಹಕ್ಕಗಳು ಜೊತೆಗೆ ನಮ್ಮ ಕರ್ತವ್ಯಗಳನ್ನು ನಾವು ಪ್ರಾಮಾಣಿಕವಾಗಿ ಮಾಡೋಣ ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಿ ಎಂದು ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅನ್ನಪೂರ್ಣ ಭಟ್ಟ ಪ್ರಾಸ್ಥಾವಿಕವಾಗಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಗುಡ್ಡಪ್ಪ ಕಾತೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನ್ಯಾಯವಾದಿಗಳಾದ ಜಿ.ಆರ್.ಆಲದಕಟ್ಟಿ, ಗೀತಾ ಡಿ.ಕೆ, ರಮೇಶ ಬಂಕಾಪುರ, ಮುಖ್ಯೊಪಾದ್ಯ ಮಂಗಲಾ ನಾಯ್ಕ, ಶಿಕ್ಷಕ ಸತೀಶ ಮಡಿವಾಳ ಮುಂತಾದವರಿದ್ದರು. ನ್ಯಾಯವಾದಿ ಆರ್.ಬಿ ಹುಬ್ಬಳ್ಳಿ ಸ್ವಾಗಿತಿಸಿ ನಿರೂಪಿಸಿ ದರು ವಾಣಿಶ್ರೀ ಕುಲಕರ್ಣಿ ವಂದಿಸಿದರು







