ಸ್ವಚ್ಛತೆಗೆ ಮಹತ್ವ: ಹಿಂದೂ ಯುವಕರಿಂದ ತಂಪು ಪಾನೀಯ
ಮೀಲಾದುನ್ನಬಿ

ಉಡುಪಿ: ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನಾಚರಣೆಯ ಅಂಗವಾಗಿ ವಿವಿದೆಡೆಗಳಲ್ಲಿ ಮೀಲಾದುನ್ನಬಿ ಆಚರಣೆಯು ಉಡುಪಿ ಜಿಲ್ಲೆಯ ವಿವಿದೆಢೆಗಳಲ್ಲಿ ಶುಕ್ರವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಹೆಜಮಾಡಿ, ಪಡುಬಿದ್ರಿ, ಉಚ್ಚಿಲ, ಎರ್ಮಾಳು, ಮೂಳೂರು, ಕಟಪಾಡಿ, ಹೂಡೆ, ಕುಂದಾಪುರ ಕೋಡಿ, ಕಾರ್ಕಳ, ಶಿರ್ವ, ಬೆಳಪು ಹಾಗೂ ಇನ್ನಿತರ ಕಡೆಗಳಲ್ಲಿ ಆಯಾಯ ಮಸೀದಿಗಳಲ್ಲಿ ಬೃಹತ್ ಜಾಥಾ ನಡೆಯಿತು. ಮೆರವಣಿಗೆಯಲ್ಲಿ ಮದರಸ ವಿದ್ಯಾರ್ಥಿಗಳು ಹಾಗೂ ಜಮಾಅತ್ ಬಾಂಧವರು ಪಾಲ್ಗೊಂಡರು. ಮದರಸ ವಿದ್ಯಾರ್ಥಿಗಳ ಆಕರ್ಷಕ ದಫ್, ಸ್ಕೌಟ್ ಆಂಡ್ ಗೈಡ್ಸ್ ವಿಶೇಷ ಗಮನಸೆಳೆದವು. ಮೆರವಣಿಗೆಯ ಉದ್ದಕ್ಕೂ ತಂಪು ಪಾನೀಯ, ಚಾಕಲೇಟ್, ಐಸ್ ಕ್ರೀಂ, ಜ್ಯೂಸ್‌ಗಳನ್ನು ನೀಡಲಾಯಿತು.
ಸ್ವಚ್ಛತೆಗೆ ಮಹತ್ವ: ಪಡುಬಿದ್ರಿಯಲ್ಲಿ ಕಂಚಿನಡ್ಕ ಜುಮಾ ಮಸೀದಿಯಿಂದ ಹೊರಟ ಜಾಥಾವು ಪಡುಬಿದ್ರಿ ಜುಮ್ಮಾ ಮಸೀದಿಗೆ ತಲುಪಿತು. ಈ ವೇಳೆ ಮೆರವಣಿಗೆಯ ಉದ್ದಕ್ಕೂ ಸ್ವಚ್ಛತೆಗೆ ಮಹತ್ವ ನೀಡುವ ಮೂಲಕ ಗಮನಸೆಳೆಯಿತು. ಮೆರವಣಿಗೆಯಲ್ಲಿ ನೀಡುವ ಪಾನೀಯಗಳ ಎಸೆದ ಲೋಟ ಹಾಗೂ ಐಸ್‌ಕ್ರೀಂನ ಡಬ್ಬಗಳನ್ನು ಎಸ್‌ವೈಎಸ್ ಸಂಘಟನೆಯು ವ್ಯವಸ್ಥೆ ಮಾಡಿದ ಮೆರವಣಿಗೆಯ ಹಿಂಬದಿಯಿಂದ ಸ್ವಯಂ ಸೇವಕರು ಸ್ವಚ್ಛ ಮಾಡಿ ಟೆಂಪೋದಲ್ಲಿ ಹಾಕುವ ಮೂಲಕ ಗಮನಸೆಳೆದರು.
ಹಿಂದೂ ಯುವಕರಿಂದ ಪಾನೀಯ: ಉಚ್ಚಿಲ ಪೇಟೆಯಲ್ಲಿ ಸೌಹಾರ್ಧದ ಪ್ರತೀಕವಾಗಿ ಉಚ್ಚಿಲ ಗಣೇಶೋತ್ಸವ ಸಮಿತಿ ಸದಸ್ಯರು ಮೆರವಣಿಗೆಯಲ್ಲಿದ್ದ ವರಿಗೆ ತಂಪು ಪಾನೀಯ ವಿತರಿಸಿ ಸಮಾಜದಲ್ಲಿ ಸೌಹರ್ದತೆ ಮೆರೆದಿದ್ದಾರೆ. ಈ ಪ್ರಕ್ರಿಯೆ ಶ್ಲಾಘನೆಗೆ ಪಾತ್ರವಾಗಿದೆ. ಇದೇ ಸಂದರ್ಭ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ತಂಪು ಪಾನೀಯ ಐಸ್ ಕ್ರೀಂಗಳನ್ನು ವಿತರಿಸಿದ್ದು ಕಂಡುಬಂದಿದೆ.







