ಉ.ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇವಿಎಂ ದೋಷ?
"ನನ್ನ ಮತವೇ ನನಗೆ ಬಿದ್ದಿಲ್ಲ ಎನ್ನುತ್ತಿದ್ದಾರೆ" ಸೊನ್ನೆ ಮತ ಪಡೆದ ಅಭ್ಯರ್ಥಿ

ಲಕ್ನೋ, ಡಿ.1: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಆದರೆ ಟ್ಟಿಟರ್ ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋವೊಂದು ಚುನಾವಣೆಯಲ್ಲಿ ಬಳಸಲಾದ ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿದೆ ಎಂದು nationalheraldindia.com ವರದಿ ಮಾಡಿದೆ.
ಉತ್ತರ ಪ್ರದೇಶದ ಶಹರಾನ್ಪುರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಬನಾ ಅವರು ಒಂದೂ ಮತಗಳನ್ನು ಪಡೆದಿಲ್ಲ. “ಕೊನೆಯ ಪಕ್ಷ ನನ್ನ ಕುಟುಂಬಸ್ಥರಾದರೂ ನನಗೆ ಮತ ನೀಡಿದ್ದಾರೆ. ಹಾಗಾದರೆ ಒಂದು ಮತವನ್ನು ಪಡೆಯದಿರಲು ಹೇಗೆ ಸಾಧ್ಯ” ಎಂದವರು ಪ್ರಶ್ನಿಸಿದ್ದಾರೆ.
“ನಾನು ನೀಡಿದ ಮತ ಎಲ್ಲಿ ಮಾಯವಾಗಿದೆ. ನಮ್ಮ ಕುಟುಂಬದಿಂದ ಕನಿಷ್ಠ ಮೂರು ಮತಗಳು ಬಿದ್ದಿದೆ. ಆದರೆ ನಮಗೆ ಕಡೆಯ ಪಕ್ಷ 900 ಮತಗಳಾದರೂ ಬೀಳಬೇಕಿತ್ತು” ಎಂದು ಶಬನಾರ ಪತಿ ಆಜ್ ತಕ್ ನ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಶಹರಾನ್ಪುರಕ್ಕೆ ಇದೇ ಮೊದಲ ಬಾರಿ ಮುನಿಸಿಪಲ್ ಚುನಾವಣೆ ನಡೆದಿತ್ತು. ಮತದಾರರ ಪಟ್ಟಿಯಲ್ಲಿ ಹಲವರ ಹೆಸರುಗಳು ನಾಪತ್ತೆಯಾಗಿದೆ ಎನ್ನುವ ಅರೋಪಗಳೂ ಇದೇ ಕೇಂದ್ರದಿಂದ ಈ ಹಿಂದೆ ಕೇಳಿಬಂದಿತ್ತು.
ಮತದಾನದ ದಿನವೂ ಇಲ್ಲಿ ಮತಯಂತ್ರದ ಯಡವಟ್ಟುಗಳು ಸಂಭವಿಸಿತ್ತು. ಮೀರತ್ ಹಾಗು ಶಹರಾನ್ಪುರದ ಹಲವೆಡೆ ಬೇರೆ ಯಾವುದೇ ಪಕ್ಷಗಳಿಗೆ ಮತ ಹಾಕಿದರೂ ಬಿಜೆಪಿಗೆ ಮತ ಬೀಳುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.
यूपी निकाय चुनाव : सहारनपुर के नूरबस्ती से निर्दलीय उम्मीदवार शबाना ने EVM पर उठाए सवाल, कहा मैंने और मेरे परिवार ने तो मुझे वोट दिया था तो फिर मुझे 0 वोट कैसे मिले? शबाना के पति ने पूछा, मैंने जो वोट दिया वो कहां गया? pic.twitter.com/2Gs2c9wtW8
— ASHUTOSH MISHRA (@ashu3page) 1 December 2017







