ಸೈಯದ್ ಮದನಿ ಮೊಹಲ್ಲಾ ಒಕೂಟದ ಐತಿಹಾಸಿಕ ಮೀಲಾದ್ ಕಾಲ್ನಾಡಿಗೆ ಜಾಥಾ

ಉಳ್ಳಾಲ, ಡಿ. 1: ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಆಯೀಜಿಸಿದ ಮೀಲಾದುನ್ನಬಿ ಪ್ರಯುಕ್ತ ಬ್ರಹತ್ ಕಾಲ್ನಾಡಿಗ ಜಾಥಾ ಹಝ್ರತ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ ಅಳೇಕಲ ದರ್ಗಾದಿಂದ ಮಂಚಿಲ ತೊಕ್ಕೋಟ್ಟು ಟಿ.ಸಿ ರೋಡ್ ಅಕ್ಕರಕರೆ ಮಾಸ್ತಿಕಟ್ಟೆ ಮೇಲಂಗಡಿ ಮಾರ್ಗವಾಗಿ ಉಳ್ಳಾಲ ದರ್ಗಾದಲ್ಲಿ ಸಮಾಪ್ತಿಗೊಂಡಿತು.
ಅಳೇಕಲ ಮಸೀದಿಯ ಖತೀಬ್ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದರು ದುಆ ನೆರೆವೇರಿಸಿದರು. ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಅಳೇಕಲ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಮಸೀದಿಯ ಖತೀಬ್ ಎಂ.ಸಿ ಮೋಙಂ ಫೈಝಿ ಉದ್ಘಾಟಿಸಿದರು. ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಳ್ಳಾಲದ 33 ಮೊಹಲ್ಲಾದ ನಾಗರಿಕರು, 15 ಮದ್ರಸದ ವಿಧ್ಯಾರ್ಥಿಗಳು, ಅಧ್ಯಾಪಕರು ಹಲವಾರು ಗಣ್ಯ ವ್ಯಕ್ತಿಗಳು ಉಳ್ಳಾಲ ಪುರಸಬೆಯ ಮಾಜಿ ಅಧ್ಯಕ್ಷ ಯು.ಎ. ಇಸ್ಮಾಯಿಲ್, ಉಳ್ಳಾಲ ನಗರ ಸಭೆಯ ಸದಸ್ಯರಾದ ಅಶ್ರಫ್ ಬಾವ , ಇಬ್ರಾಹೀಂ ಶೌಕತ್ , ಮೊಹಲ್ಲಾ ಒಕ್ಕೂಟದ ಪ್ರ್.ಕಾರ್ಯದರ್ಸಿ ಹಮೀದ್ ಮಂಚಿಲ, ಅಳೇಕಲ ಮಸೀದಿಯ ಪ್ರ.ಕಾರ್ಯದರ್ಸಿ ಅಶ್ರಫ್ ಯು.ಡಿ, ಉಳ್ಳಾಲ ದರ್ಗ ಸಮಿತಿ ಸದಸ್ಯರಾದ ಹನೀಫ್ ಹಾಜಿ ಮಾರ್ಗತಲೆ, ಶರೀಫ್ ಅಳೇಕಲ, ಔದಿ ಕೋಡಿ, ಮಾರ್ಗತಲೆ ಮಸೀದಿಯ ಪ್ರ.ಕಾರ್ಯದರ್ಶಿ ಯು.ಕೆ ಕಾದರ್, ಮಂಚಿಲ ಮಸೀದಿಯ ಅಧ್ಯಕ್ಷ ಮಕ್ಸೂದ್, ದ.ಕ ಜೊಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಅಲ್ತಾಫ್ ಕುಂಪಲ, ಪತ್ಲಾ ಮಸೀದಿಯ ಪ್ರ.ಕಾರ್ಯದರ್ಶಿ ಸದ್ದಾಂ, ದಾರಂದಬಾಗಿಲು ಅಧ್ಯಕ್ಷ ಮುಸ್ತಫಾ ಮುಂಡೋಲಿ., ಪ್ರ.ಕಾರ್ಯದರ್ಶಿ ಮಂಸೂರ್, ಸುಂದರಿಬಾಗ್ ಮಸೀದಿಯ ಅಧ್ಯಕ್ಷ ಆಸಿಫ್, ಪ್ರ.ಕಾರ್ಯದರ್ಸಿ ಹಂಝ, ಸಯ್ಯದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಜಮಾಲ್ ಮುಸ್ಲಿಯಾರ್, ತೋಟ ಮಸೀದಿಯ ಅಧ್ಯಕ್ಷ ಇಬ್ರಾಹಿಂ, ಪ್ರ.ಕಾರ್ಯದರ್ಶಿ ಅತೀಕ್, ಮುಕ್ಕಚೇರಿ ಮಸೀದಿಯ ಕಾರ್ಯದರ್ಶಿ ಅಸ್ಗರ್, ಆಝಾದ್ ನಗರ ಮಸೀದಿಯ ಉಪಾಧ್ಯಕ್ಷ ರಫೀಕ್ ಭಾಗವಹಿಸಿದ್ದರು.







