ಡಿ.24: ತುಳುನಾಡ ಜವನೆರ್ ಸಂಘಟನೆಗೆ ಚಾಲನೆ
ಮಂಗಳೂರು, ಡಿ.1: ಯುವಜನತೆಯನ್ನು ಸಂಘಟಿಸುವ ಮೂಲಕ ತುಳುನಾಡಿನ ಜನಜೀವನವನ್ನು ಜಾನಪದ, ಸಾಂಸ್ಕೃತಿಕ, ಕ್ರೀಡೆ ಇತ್ಯಾದಿಗಳನ್ನು ಪರಿಚಯಿಸುವ ದೃಷ್ಟಿಯಿಂದ ತುಳುನಾಡ ಜವನೆರ್ ಕುಡ್ಲ ಎಂಬ ಸಂಘಟನೆಯನ್ನು ಆರಂಭಿಸಲಾಗಿದೆ. ಈ ಸಂಘಟನೆಗೆ ಡಿ.24ರಂದು ಉಳ್ಳಾಲದಲ್ಲಿ ಚಾಲನೆ ನೀಡಲಾಗುವುದು ಎಂದು ಸಂಸ್ಥೆಯ ಸಂಚಾಲಕ ಸುಜೀತ್ ಮಾಡೂರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯುವ ಜನಾಂಗಕ್ಕಾಗಿ ಮಂಗಳೂರು ನಗರವನ್ನು ಕೇಂದ್ರಿಕರಿಸಿ ಈ ಸಂಘಟನೆ ಕಾರ್ಯಾಚರಿಸಲಿದೆ. ಈ ಭಾಗದ ಯುವಕರು ಮತ್ತು ಸಂಘ ಸಂಸ್ಥೆಗಳ ಹಾಗೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮುಖಂಡರನ್ನು ಭೇಟಿ ಮಾಡಿ ಸಾರ್ವಜನಿಕ ನಿಧಿಯನ್ನು ಸಂಗ್ರಹಿಸಿ ಭಾವೈಕ್ಯ ದೃಷ್ಟಿಯಿಂದ ಜನರನ್ನು ಒಗ್ಗೂಡಿಸಿ ಸಂಘಟನೆಯನ್ನು ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದು ಸುಜೀತ್ ಮಾಡೂರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಾಹುಲ್ ಉಳ್ಳಾಲ್, ಅಶ್ವಿನ್ ಕೊಲ್ಯ, ರಾಜೇಶ್ ಉಳ್ಳಾಲ್, ಅಜಂತ್ ಪಿಲಾರ್ ಉಪಸ್ಥಿತರಿದ್ದರು.
Next Story





