ದೇರಳಕಟ್ಟೆ: ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಉಳ್ಳಾಲ, ಡಿ.1. ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದ್ರಸ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರವಾದಿ ಜನ್ಮ ದಿನಾಚಾರಣೆ ಪ್ರಯುಕ್ತ ಕಣಚೂರು ಅಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ದ.ಕ. ವಕ್ಫ್ ಬೋರ್ಡ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ. ಕಣಚೂರು ಮೋನು, ಹಯಾತುಲ್ ಇಸ್ಲಾಂ ಮದ್ರಸ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಡಿ.ಎ., ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಮುಹಮ್ಮದ್, ಬೆಳ್ಮ ಗ್ರಾಪಂ ಸದಸ್ಯ ಕಬೀರ್ ಡಿ, ಸಮಾಜ ಸೇವಕರಾದ ಏಷ್ಯನ್ ಬಾವಾ ಹಾಜಿ, ಶರೀಫ್ ಕೆ.ಎಂ., ದೇರಳಕಟ್ಟೆ ಕೇಂದ್ರ ಜುಮಾ ಮಸೀದಿಯ ಗೌರವಾಧ್ಯಕ್ಷ ಡಿ. ಇದಿನಬ್ಬ ಹಾಜಿ, ಅಧ್ಯಕ್ಷ ಅಬ್ಬಾಸ್ ಡಿ., ಉಪಾಧ್ಯಕ್ಷ ಅಬ್ದುಲ್ ಅಝೀಝ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಆರ್. ರಹ್ಮಾನ್, ಜೊತೆ ಕಾರ್ಯದರ್ಶಿಗಳಾದ ಮುಹಮ್ಮದಾಲಿ, ಹಯಾತುಲ್ ಇಸ್ಲಾಂ ಮದ್ರಸ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್ ಕೆ.ಎಂ., ಉಪಾಧ್ಯಕ್ಷ ರಿಯಾಝ್ ಡಿ.ಎಂ., ಪ್ರಧಾನ ಕಾರ್ಯದರ್ಶಿ ಅಶ್ರಫ್ ಡಿ.ಎ., ಜೊತೆ ಕಾರ್ಯದರ್ಶಿಗಳಾದ ಶಿಹಾಬುದ್ದೀನ್ ಡಿ., ಖಲಂದರ್ ಶಾಫಿ, ಕೋಶಾಧಿಕಾರಿ ಯಾಸೀರ್ ಡಿ., ಮಾಜಿ ಅಧ್ಯಕ್ಷ ನಾಸೀರ್ ಅಹ್ಮದ್ ಉಪಸ್ಥಿತರಿದರು.





